ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಹಳಗೇರಿಯ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದಲ್ಲಿ ತೃತೀಯ ವರ್ಷದ ವರ್ಧಂತ್ಯುತ್ಸವ, ಚಿತ್ರಕೂಟ ಸಹಿತ ಶ್ರೀ ನಾಗದೇವರ ಹಾಗೂ ಶಿರಸಿ ಶ್ರೀ ಮಾರಿಕಾಂಬ ದೇವಿಯ ಪುನರ್ ಪ್ರತಿಷ್ಠಾ- ವರ್ಧಂತ್ಯುತ್ಸವ -ಕಲಶೋತ್ಸವ, ಶ್ರೀ ಕಾಲಬೈರವ ಸೇವಾ ಸಂಘದ 12ನೇ ವಾರ್ಷಿಕೋತ್ಸವ, ಶ್ರೀ ಶಿವಗೋರಕ್ಷನಾಥ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವು ಜ.26 ರಿಂದ ಜ.27ರ ತನಕ ನಡೆಯಲಿದೆ.
ಜ. 26ರ ಬೆಳಿಗ್ಗೆ 9.30ರಿಂದ ಚಿತ್ರಕೂಟ ಸಹಿತ ಶ್ರೀ ನಾಗದೇವರಿಗೆ ಪಂಚವಿಂಶತಿ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾ ಪೂಜೆ, ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾ ವರ್ಧಂತ್ಯುತ್ಸವ, ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಂಜೆ 6.00ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕಿರ್ತನೆ ನಡೆಯಲಿದೆ.
ಜ.27ರ ಬೆಳಿಗ್ಗೆ 9.30ರಿಂದ ಶ್ರೀ ಕಾಲಭೈರವ ದೇವರಿಗೆ ತೃತೀಯ ವರ್ಧಂತ್ಯುತ್ಸವದ ಪ್ರಯುಕ್ತ ಅಷ್ಠೋತ್ತರ ಕಲಶ, ತತ್ವ ಹೋಮ, ಅಧಿವಾಸ ಹೋಮ, ವಿಶೇಷ ಪಂಚಾಮೃತಾಭಿಷೇಕ, ಕಲಾಶಭಿಷೇಕ, ರೂಟ್ ಪೂಜೆ, ಮಹಾಪೂಜೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ, ಗುರು ಪಾದ ಪೂಜೆ, ಮಹಾ ಅನ್ನಸಂತರ್ಪ ನಡೆಯಲಿದೆ.
ಅದೇ ದಿನ ಸಂಜೆ 5.00 ರಿಂದ ದೀಪೋತ್ಸವ, ದೇವರ ಉತ್ಸವ, ಮಹಾಪೂಜೆ ಕ್ಷೇತ್ರದ ತಂತ್ರಿಗಳಾದ ವೇದರ್ಮೂತಿ, ಬ್ರಹ್ಮಶ್ರೀ ನೀಲಾವರ ರಘುರಾಮ ಮಧ್ಯಸ್ಥರ ನೇತೃತ್ವದಲ್ಲಿ ಕ್ಷೇತ್ರದ ಜೋಯಿಸರಾದ ರಾಮಚಂದ್ರ ನಾವುಡ ತೆಂಕಬೆಟ್ಟು ಹಾಗೂ ಕ್ಷೇತ್ರ ಅರ್ಚಕರುಗಳ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವುದು.
ಸಂಜೆ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವು ವಿಶಾಲಾಕ್ಷಿ ಮತ್ತು ನಾಗಪ್ಪಯ್ಯ ನಾವುಡರ ವೇದಿಕೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಲಬೈರವ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಟಿ.ಎಸ್. ನಾಗೇಶ ಜೋಗಿ ಅವರು ವಹಿಸಲಿದ್ದಾರೆ. ಯಡಮೊಗೆ ಶ್ರೀ ಸಿದ್ದಪೀಠ ಕೊಡಚಾದ್ರಿ ಹಲವರಿಮಠ ಪೀಠಾಧ್ಯಕ್ಷರಾದ ಶ್ರೀ ಪೀರ್‌ಯೋಗೀ ಜಗದೀಶ್ ನಾಥಜೀ ಆರ್ಶಿವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಶೃಂಗೇರಿ ಶಾಖಾ ಮಠದ ಪರಮಪೂಜ್ಯ ಗುಣನಾಥ ಸ್ವಾಮೀಜಿ ಅವರು ದೀಪ ಪ್ರಜ್ವಲನ ಬೆಳಗಲಿದ್ದಾರೆ. ಹುಬ್ಬಳ್ಳಿ ಸೀತಾಗಿರಿ ಆಧ್ಯಾತ್ಮ ಪೀಠ ಅಣ್ಣಿಗೇರಿ ಶ್ರೀ ಸದ್ಗುರು ವಾಲಿ ಮಹಾರಾಜ್ ಶುಭಸಂಶನೆ ನುಡಿಯಲಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಶ್ರೀ ಶ್ರೀ ಶ್ರೀ ಶಿವಗೋರಕ್ಷಕನಾಥ ಸೇವಾ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ. ಉಡುಪಿ- ಚಿಕ್ಕಮಂಗಳೂರು ಕ್ಷೇತ್ರದ ಮಾನ್ಯ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬೆಂಗಳೂರು ಸಹಕಾರ ನಗರ ಉದ್ಯಮಿ ಟಿ. ದಿನೇಶ ನಾಗಪ್ಪಯ್ಯ ನಾವುಡ, ಉಪ್ಪುಂದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಜಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರ, ಬೈಂದೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಬಿ.ವೈ. ಸುನೀಲ್ ಕುಮಾರ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ, ಕಂಬದಕೋಣೆ ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಜೋಗಿ ಕೆಳಮನೆ, ತೆಂಕಬೆಟ್ಟು ಶ್ರೀ ಕಾಲಭೈರವ ಸೇವಾ ಸಂಘದ ಅಧ್ಯಕ್ಷ ಸುರೇಶ ಜೋಗಿ ನಾಗೂರು ಇನ್ನಿತರರು ಭಾಗವಹಿಸಲಿದ್ದಾರೆ.
ಯಕ್ಷರಂಗದಲ್ಲಿ 25 ವರ್ಷಗಳ ಸೇವೆ ಸಲ್ಲಿಸಿದ ಮಾಧವ ಜೋಗಿ ನಾಗೂರು, ನಿವೃತ್ತ ಯೋಧರಾದ ಆನಂದ ಪೂಜಾರಿ ನಾಯ್ಕನಕಟ್ಟೆ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಐಶ್ವರ್ಯ ಜೋಗಿ ಅವರಿಗೆ ಸನ್ಮಾನಿಸಲಾಗುತ್ತದೆ.
ಅಂದು ಸಂಜೆ 5.00ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಲಿದೆ. ರಾತ್ರಿ 9.30ರಿಂದ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯಿಸುವ ಯಾರು ಗ್ಯಾರಂಟಿ ಅಲ್ಲಾ ಎಂಬ ಕನ್ನಡ ಹಾಸ್ಯಮಯ ನಾಟಕ ನಡೆಯಲಿದೆ.

