ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಸಾಲಿಗ್ರಾಮ ಮುಖ್ಯ ಪೇಟೆಯಲ್ಲಿ ಗುರುವಾರ ಸಂಭ್ರಮದ ರಾಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.
ಸಾಲಿಗ್ರಾಮದ ವಾಹನ ಚಾಲಕ ಹಾಗೂ ಮಾಲಕರ ಸಂಘದ ವತಿಯಿಂದ ಏರ್ಪಡಿಸಿದ ಅಯೋಧ್ಯ ಶ್ರೀ ರಾಮ ಮಂದಿರ ಮೂರನೆ ವರ್ಷದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ವೈಭವದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಾಕ್ಷಿಯಾಯಿತು.

ಸಂಜೆ 7ಗಂಟೆಗೆ ಶ್ರೀ ಭಗವತ್ ಭಜನಾ ಮಂಡಳಿ ಕೋಟತಟ್ಟು ಪಡುಕರೆ ಅಲ್ಲಿ ಪುಟಾಣಿಗಳಿಂದ ಕುಣಿತ ಭಜನೆ, ನಂತರ ಶ್ರೀರಾಮ ಪ್ರಸಾದ ವಿತರಣೆ, 8.ಗಂಟೆಯಿಂದ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾ ರಂಗ ಇವರಿಂದ ಯಕ್ಷಗಾನ ಪಂಚವಟಿ ಪ್ರದರ್ಶನಗೊಂಡಿತು. ನೂರಾರು ಶ್ರೀ ರಾಮ ಭಕ್ತರು ಬಸ್ ನಿಲ್ದಾಣದ ಆಸುಪಾಸು ನಿಂತು ರಾಮೋತ್ಸವವನ್ನು ಸಂಭ್ರಮಿಸಿಕೊಂಡರು.
ಕಾರ್ಯಕ್ರಮವನ್ನು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಉದ್ಘಾಟಿಸಿ ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಶಿವರಾಮ ಉಡುಪ, ರಾಮೋತ್ಸವದ ಸಂಚಾಲಕ ಸಂತೋಷ್ ಮೆಂಡನ್ ಕೋಡಿ, ಸಮಿತಿಯ ಪ್ರಮುಖರಾದ ಸುರೇಂದ್ರ ಗಾಣಿಗ, ನಾಗರಾಜ್ ಮಯ್ಯ, ದಿನೇಶ್ ಕುಂಜಿಗುಡಿ, ಸಂತೋಷ್ ಪಾರಂಪಳ್ಳಿ, ದಿನೇಶ್ ಗಾಣಿಗ, ರಾಜು ಪೂಜಾರಿ ಕಾರ್ಕಡ, ನಾಗರಾಜ್ ಗಾಣಿಗ, ಜಯೇಂದ್ರ ಪೂಜಾರಿ, ರಾಘವೇಂದ್ರ ಹೆಬ್ಬಾರ್ ಮಯ್ಯ ಟಿಫಿನ್, ಮಾಧವ ಕುಂಜಿಗುಡಿ ಮತ್ತು ಇತರರು ಉಪಸ್ಥಿತರಿದ್ದರು.