Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶ್ರೀ ದುರ್ಗಾ ಮೆಡಿಕಲ್ಸ್ ಎಂಡ್ ಜನರಲ್ ಸ್ಟೋರ್ಸ್‌ ಮತ್ತು ಶ್ರೀ ದುರ್ಗಾ ಕ್ಲಿನಿಕ್‌ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಜನಸಂಖ್ಯೆಗೆ ಸರಿಯಾದ ವೈದ್ಯರು ನಮ್ಮ ದೇಶದಲ್ಲಿ ಇಲ್ಲ ಎನ್ನುವುದು ವಾಸ್ತವಾಂಶ. ಜನರು ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕಿದೆ. ಅದೆರಡು ಒಂದೇ ಊರಿನಲ್ಲಿ ಸಿಕ್ಕಿದರೆ ಜನರು ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿನ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಶ್ರೀ ದುರ್ಗಾ ಮೆಡಿಕಲ್ಸ್ ಎಂಡ್ ಜನರಲ್ ಸ್ಟೋರ್ಸ್‌ ಮತ್ತು ಶ್ರೀ ದುರ್ಗಾ ಕ್ಲಿನಿಕ್‌ನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯ ಹೆಚ್ಚಾದರೆ ಜನರು ಪಟ್ಟಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುವುದು ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಹತ್ತಿರದಲ್ಲಿ ಸಿಗಬೇಕೆನ್ನುವುದು ಜನರ ಪ್ರಮುಖ ಬೇಡಿಕೆ. ಜನಸಂಖ್ಯೆ ಹೆಚ್ಚಾದಷ್ಟು ವೈದ್ಯರು ಲಭ್ಯತೆ ಕೂಡ ಹೆಚ್ಚಾಗಬೇಕು. ಪಟ್ಟಣ ಪ್ರದೇಶಕ್ಕೆ ಸರಿಸಮಾನವಾದ ವ್ಯವಸ್ಥೆಯನ್ನು ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಮಾಡಿರುವುದು ಶ್ಲಾಘನೀಯ ಎಂದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಮೆಡಿಕಲ್ ಫಾರ್ಮಸಿ ಕೌಂಟರ್‌ನ್ನು ಮತ್ತು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಕ್ಲಿನಿಕ್‌ನ್ನು ಉದ್ಘಾಟಿಸಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಮತ್ತು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ಶುಭ ಹಾರೈಸಿದರು. ಡಾ. ಮಂಜು ಎಂ., ಶಶಿಕಿರಣ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ದುರ್ಗಾರಾಜ್ ಪೂಜಾರಿ ಗಂಗೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. 

Exit mobile version