Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ವಿದ್ಯಾಸಂಸ್ಥೆಯಲ್ಲಿ ʼಗುರುಕುಲ ಕಾರ್ನಿವಲ್‌ ಮಕ್ಕಳ ಹಬ್ಬʼ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
‘ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಬೇಕು. ಪೋಷಕರು ಮಕ್ಕಳಿಗೆ ಅದೇ ಮಾಡಿ ಇದೇ ಮಾಡಿ ಎಂದು ಒತ್ತಡ ಹೇರಬಾರದು’ ಎಂದು ಸು-ಫಮ್- ಸೋ’ ಚಿತ್ರದ ಮೂಲಕ ರವಿಯಣ್ಣ ಎಂದೇ ಪ್ರಸಿದ್ಧಿ ಪಡೆದ, ನಟ ಗೌತಮ್ ಶನೀಲ್ ಕಿವಿಮಾತು ಹೇಳಿದರು.

ಅವರು ತಾಲೂಕಿನ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ʼಗುರುಕುಲ ಕಾರ್ನಿವಲ್‌ ಮಕ್ಕಳ ಹಬ್ಬʼ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಸು ಫ್ರಮ್ ಸೋ’ ಚಿತ್ರದ ನಟ ರವಿಯಣ್ಣ ಮಕ್ಕಳ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದರು. ಚೆಂಡೆವಾದನ ಮೋಜು ಮೋಜಿನ ಮುಖವಾಡ ನೃತ್ಯ ತಂಡದೊಂದಿಗೆ ವೇದಿಕೆಗೆ ಬರುವಾಗ ರವಿಯಣ್ಣನಿಗೆ ಮಕ್ಕಳಿಂದ ಭಾರೀ ಕರತಾಡನದ ಸ್ವಾಗತ ದೊರೆಯಿತು. ಚಿತ್ರದ ಹಾಡಿಗೆ ಮಕ್ಕಳು, ಶಿಕ್ಷಕರೊಂದಿಗೆ ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿದರು. ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.

ಶಾಲಾ ಆವರಣದಲ್ಲಿ ವೈವಿಧ್ಯಮಯ ಮಳಿಗೆ:
ಮಕ್ಕಳಿಗೆ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಸಲುವಾಗಿ ಮಕ್ಕಳು, ಪೋಷಕರ ಸಹಿತ 50 ಕ್ಕೂ ಮಿಕ್ಕಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿತ್ತು. ಮಕ್ಕಳು, ಪೋಷಕರೇ ವರ್ತಕರಾಗಿದ್ದು, ತಂಪು ಪಾನೀಯ, ತಿಂಡಿ -ತಿನಸು, ಬಟ್ಟೆ ಪುಸ್ತಕ, ಫ್ರಾನ್ಸಿ ವಸ್ತುಗಳು, ಪೈಂಟಿಂಗ್, ಫಾಸ್ಟ್ ವುಡ್ ಮಳಿಗೆಗಳು ಕ್ಯಾಂಪಸ್ ನಲ್ಲಿ ಗಮನಸೆಳೆದವು. ಮಕ್ಕಳು ಪೋಷಕರಿಂದ ಭರ್ಜರಿ ವ್ಯಾಪಾರ ನಡೆಯಿತು.

ಚಿಣ್ಣರ ಪ್ರಿನ್ಸ್‌ –ಪ್ರಿನ್ಸಸ್‌ ಸ್ಪರ್ಧೆ:
3 ರಿಂದ 5 ವರ್ಷದ ಪುಟಾಣಿಗಳಿಗೆ ನಡೆದ ಪ್ರಿನ್ಸ್‌ ಪ್ರಿನ್ಸಸ್ (ರಾಜ-ರಾಣಿ) ಸ್ಪರ್ಧೆಯು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ಚಿಣ್ಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಗಾಳಿಪಟ ಉತ್ಸವದಲ್ಲಿ ಚಿಣ್ಯರು ಪಾಲ್ಗೊಂಡು ಖುಷಿಪಟ್ಟರು.

ಸತತ 216 ಗಂಟೆಗಳ ಕಾಲ ನೃತ್ಯ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್‌ ಆಫ್ ವಿಶ್ವದಾಖಲೆಗೆ ಪಾತ್ರರಾದ ವಿದುಷಿ ದೀಕ್ಷಾ ಅವರಿಂದ ನಾಟ್ಯ ಪ್ರದರ್ಶನ, ಪ್ರಸಿದ್ದ ಜಾದೂಗಾರ ಕುದ್ರೋಳಿಯ ಗಣೇಶ್ ಅವರಿಂದ ಜಾದೂ ಪ್ರದರ್ಶನ, ಮಕ್ಕಳು, ಶಿಕ್ಷಕ ವೃಂದದವರಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ರಂಜಿಸಿದರು.

ವೇದಿಕೆಯಲ್ಲಿ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅನುಪಮಾ ಎಸ್. ಶೆಟ್ಟಿ ಪ್ರಾಂಶುಪಾಲೆ ಡಾ. ರೂಪಾ ಶೆಣೈ ಉಪಸ್ಥಿತರಿದ್ದರು. ಅನುರಾಧ ಪ್ರಾರ್ಥಿಸಿದರು. ಸಂಧ್ಯಾ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲೆ ಡಾ. ರೂಪಾ ಶೆಣೈ ಸ್ವಾಗತಿಸಿ, ಶಿಕ್ಷಕಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಸುಷ್ಮಾ ವಂದಿಸಿದರು.

Exit mobile version