Site icon Kundapra.com ಕುಂದಾಪ್ರ ಡಾಟ್ ಕಾಂ

ಹಣ ದ್ವಿಗುಣದ ಆಮಿಷ: ಕಾಲೇಜು ಉಪನ್ಯಾಸಕನಿಗೆ 26ಲಕ್ಷ ರೂ. ವಂಚನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರಿಚ್ ಲೈಫ್ ಕೇರ್ ಕಂಪೆನಿ ಹೆಸರಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂದು ಹೇಳಿ ಬರೋಬ್ಬರಿ 26ಲಕ್ಷ ರೂ. ಗೂ ಮಿಕ್ಕಿ ಹಣ ಪಡೆದು ಖಾಸಗಿ ಕಾಲೇಜು ಉಪನ್ಯಾಸಕರೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಕಾಲೇಜು ಉಪನ್ಯಾಸಕ ಸುಬ್ರಹ್ಮಣ್ಯ ವಿಜಯ್ ಆರ್. (38) ವಂಚನೆಗೊಳಗಾದವರು.

ಅವರಿಗೆ ಬಾರ್ಕೂರಿನ ರಾಘವೇಂದ್ರ ಮೂಲಕ ಪರಿಚಯವಾದ ಮುಂಬಯಿಯ ಸಂತೋಷ್ ಮಹೇಂದ್ರ (43) ಎಂಬಾತ ವಂಚಿಸಿದ ಆರೋಪಿ.

2022ರ ಜೂನ್ ನಲ್ಲಿ ಕಾವಾಡಿಯ ಕಂಪ್ಯೂರಲ್ಲಿ ರಾಘವೇಂದ್ರ ಜತೆ ಸುಬ್ರಹ್ಮಣ್ಯ ವಿಜಯ್ ಅವರು ಆರೋಪಿ ಸಂತೋಪ್ ಮಹೇಂದ್ರನನ್ನು ಭೇಟಿಯಾಗಿ, ಹಣ ಹೂಡಿಕೆ ಬಗ್ಗೆ ಮಾಹಿತಿ ಪಡೆದಿದ್ದು, ಆತನ ಮಾತನ್ನು ನಂಬಿ ಅಲ್ಲಿಯೇ 2.96 ಲಕ್ಷ ರೂ. ನೀಡಿದ್ದರು. 30 ಲಕ್ಷ ರೂ. ಗಿಂತ ಹೆಚ್ಚಿನ ಹೂಡಿಕ ಮಾಡಿದರೆ, ಒಂದು ಕಾರು ನೀಡುವುದಾಗಿಯೂ ಆರೋಪಿ ತಿಳಿಸಿದ್ದಾನೆ.

ಅನಂತರ ಸುಬ್ರಹ್ಮಣ್ಯ ವಿಜಯ್ ಅವರ ಖಾತೆಯಿಂದ ಆರೋಪಿಯ ಬ್ಯಾಂಕ್ ಖಾತೆಗೆ 26.50 ಲಕ್ಷ ರೂ. ಹಣ ಜಮೆ ಮಾಡಿದ್ದಾರೆ. ಆ ಬಳಿಕ ಹೂಡಿಕೆ ಮಾಡಿದ ಹಣ ಕೇಳಿದಾಗ, ಒಟ್ಟು 2 ಲಕ್ಷ ರೂ. ಅಷ್ಟೇ ಹಿಂದಿರುಗಿಸಲಾಗಿದೆ. ಈ ಬಗ್ಗೆ ರಾಘವೇಂದ ನ ಮೊಬೈಲ್‌ನಿಂದ ಸುಬ್ರಹ್ಮಣ್ಯ ಅವರು ಆರೋಪಿಗೆ ಕರೆ ಮಾಡಿದಾಗ ಆತ ಅವಾಚ್ಯವಾಗಿ ನಿಂದಿಸಿರುವುದಲ್ಲದೆ, ಜನ ಬಿಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಸುಬ್ರಹ್ಮಣ ವಿಜಯ್‌ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲಿ ಪ್ರಕರಣ ದಾಖಲಾಗಿದೆ.

Exit mobile version