Site icon Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಪವಿತ್ರ ಎ.ವಿ. ಅವರಿಗೆ ಪಿಎಚ್‌ಡಿ ಪದವಿ ಪ್ರದಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರ ಎ.ವಿ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದ್ದಾರೆ.

ಪವಿತ್ರ ಎ.ವಿ ಅವರು ‘ಸೈಕೋಸೋಷಿಯಲ್ ಡೈಮೆನ್ಶನ್ಸ್ ಆಫ್ ಸುಸೈಡಲ್ ಬಿಹೇವಿಯರ್ ಅಮಾಂಗ್ ರೂರಲ್ ಅಡೊಲೆಸೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಗವರ್ನ್ಮೆಂಟ್ ಪ್ರಿಯುನಿವರ್ಸಿಟಿ ಕಾಲೇಜಸ್ ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಲೋಕೇಶ್ ಎಂ. ಯು. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದಿದ್ದಾರೆ.

ಜ.30 ರಂದು ನಡೆದ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಅವರು ಪದವಿ ಪ್ರದಾನ ಮಾಡಿದರು.

ಅವರು ಎಮ್‌ಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಚೀಫ್ ಮ್ಯಾನೇಜರ್ ಸ್ವಾಮಿ ಪ್ರಸಾದ್ ಅವರ ಪತ್ನಿ.

Exit mobile version