Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಬೈಕ್‌ ಪಲ್ಟಿಯಾಗಿ ಸವಾರ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ :
ಇಲ್ಲಿನ ನಾಡಗುಡ್ಡೆಯಂಗಡಿಯ ಬೆಳ್ಳಾಡಿಯಲ್ಲಿ ರವಿವಾರ ರಾತ್ರಿ ಸವಾರನ ನಿಯಂತ್ರಣ ತಪ್ಪಿ ಬೈಕ್‌ ಪಲ್ಟಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದಾರೆ. ಕೋಟ ಮಣೂರು ಪಡುಕರೆ ನಿವಾಸಿ ಪ್ರಭಾಕರ್ ಮೆಂಡನ್ ಮೃತರು.

ಅವರು ರಾತ್ರಿ ಮಣೂರು ಪಡುಕರೆ ಮನೆಯಿಂದ ತಮ್ಮ ಪತ್ನಿಯ ಮನೆಗೆ ತೆರಳುತ್ತಿದ್ದ ಸಂದರ್ಭ, ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಗಂಗೊಳ್ಳಿ ಆಪದ್ಭಾಂಧವ ಆಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ, ದಾರಿ ಮಧ್ಯೆ ಪ್ರಭಾಕರ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮೃತ ಪ್ರಭಾಕರ್ ಮೆಂಡನ್ ಅವರು ಯಕ್ಷಗಾನ ಕಲಾವಿದ ದಿ। ಮೊಳಹಳ್ಳಿ ಹೆರಿಯ ನಾಯಕ್ ಅವರ ಹಿರಿಯ ಪುತ್ರ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Exit mobile version