Kundapra.com ಕುಂದಾಪ್ರ ಡಾಟ್ ಕಾಂ

ಕುಸುಮ ಫೌಂಡೇಶನ್‌ ಸಾಂಸ್ಕೃತಿಕ ಲೋಕದ ಅನಾವರಣ – ‘ಕುಸುಮಾಂಜಲಿ – 2015’

ಸಾಲುಮರದ ತಿಮ್ಮಕ್ಕನಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ.

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಳೆದ ಒಂದೂವರೆ ದಶಕದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳು ಇಂದು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯೊಂದಿಗೆ ಈ ಭಾರಿ ‘ಕುಸುಮಾಂಜಲಿ – 2015’ ಆಯೋಜಿಸಲಾಗಿದೆ. ಡಿ.26ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ ನಾಡಿನ ಶ್ರೇಷ್ಠ ಸಾಧಕರೊಬ್ಬರಿಗೆ ಕುಸುಮಾಶ್ರೀ ಹಾಗೂ ಪರಿಸರದ ವಿಶೇಷ ಗಾನ ಪ್ರತಿಭೆಗೆ ಗಾನ ಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. (ಕುಂದಾಪ್ರ ಡಾಟ್ ಕಾಂ)

[quote font_size=”15″ bgcolor=”#ffffff” arrow=”yes” align=”right”]ಡಿ.26 ಸಂಜೆ ಕುಸುಮಾಂಜಲಿ:

ಕುಸುಮ ಗ್ರೂಪ್ ’ಕುಸುಮಾಂಜಲಿ 2015’ ಕುಸುಮಶ್ರೀ ಹಾಗೂ ಗಾನಕುಸುಮ ಪ್ರಶಸ್ತಿ ಪ್ರದಾನ ಸಮಾರಂಭ ಡಿ.26ರ ಶನಿವಾರ ಸಂಜೆ ಗಂಟೆ 5 ರಿಂದ 10:30 ರ ವರೆಗೆ ನಾಗೂರಿನ ‘ಕುಸುಮ ಗ್ರೂಪ್’ ಪರಿಸರದಲ್ಲಿ ನಡೆಯಲಿದೆ. ಗಾನಕುಸುಮ ಸಂಗೀತ ಸ್ವರ್ಧೆಯಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುಲಿದ್ದು ಸಾಹಿತಿ ಜಯಂತ ಕಾಯ್ಕಿಣಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅದೇ ವೇದಿಕೆಯಲ್ಲಿ ಕುಸುಮಾಶ್ರೀ ಹಾಗೂ ಗಾನಕುಸುಮ ಪ್ರಶಸ್ತಿ ಪ್ರದಾನವೂ ನಡೆಯಲಿದೆ.

ಸಂಜೆ 8:30ರಿಂದ ವಿದ್ವಾನ್ ಸುಧೀರ್ ರಾವ್ ನೇತೃತ್ವದ ತಂಡ ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯ ಕಾರ್ಯಕ್ರಮ, ಬಳಿಕ ಸುಬ್ರಹ್ಮಣ್ಯ ಧಾರೇಶ್ವರ ಬಳಗದಿಂದ ಯಕ್ಷರೂಪಕ ಹಾಗೂ ಶ್ರೀಮತಿ ಸಂಗೀತಾ ಬಾಲಚಂದ್ರ ಬಳಗದಿಂದ ಸುಮಧುರ ಸಂಗೀತ ಕಾರ್ಯಕ್ರಮ ನಡೆಯಲಿದೆ.

[/quote]

ಸಾಲುಮರದ ತಿಮ್ಮಕ್ಕನಿಗೆ ಕುಸುಮಾಶ್ರೀ ಪ್ರಶಸ್ತಿ:
ಕುಸುಮಾ ಫೌಂಡೇಶನ್ ಕುಸುಮಾಂಜಲಿ ಆಯೋಜಿಸುವುದರೊಂದಿಗೆ ಈ ಭಾರಿಯಿಂದ ನಾಡಿನ ವಿಶೇಷ ಸಾಧಕರಿಗೆ ‘ಕುಸುಮಾಂಜಲಿ ಪ್ರಶಸ್ತಿ’ಯನ್ನು ನೀಡುತ್ತಿದೆ. ಮರಗಳನ್ನೇ ಮಕ್ಕಳೆಂದು ಜತನದಿಂದ ಸಾಕಿ ಸಲುಹಿದ ಸಾಲು ಮರದ ತಿಮ್ಮಕ್ಕ ಪ್ರಥಮ ವರ್ಷದ ಕುಸುಮಾಂಜಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು, ಸ್ಮರಣಿಕೆ ಫಲವನ್ನೊಳಗೊಂಡಿರುತ್ತದೆ.

ಗಾನಕುಸುಮ ವಿಜೇತರಿಗೆ ಗಾನಕುಸುಮ ಪ್ರಶಸ್ತಿ:
ಕುಸುಮಾಂಜಲಿಗೆ ಪೂರ್ವಭಾವಿಯಾಗಿ ಬೈಂದೂರು ವಲಯ ಹಾಗೂ ಗಂಗೊಳ್ಳಿ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಗಾನ ಕುಸುಮ ಸಂಗೀತ ಸ್ವರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಿದ್ದರು. ಎರಡು ಸುತ್ತು ಸ್ವರ್ಧೆಯ ಬಳಿಕ ಅಂತಿಮವಾಗಿ 12 ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುತ್ತು. ಅಲ್ಲಿ ಆಯ್ಕೆಯಾದ 12 ಮಂದಿ ‘ಕುಸುಮಾಂಜಲಿ’ ಕಾರ್ಯಕ್ರಮದಲ್ಲಿ ಹಾಡುವುದಲ್ಲದೇ ಅವರಲ್ಲಿ ಇಬ್ಬರಿಗೆ ಗಾನಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. (ಕುಂದಾಪ್ರ ಡಾಟ್ ಕಾಂ)

ಕುಸುಮ ಸಮೂಹ ಸಂಸ್ಥೆಗಳು:
ಹದಿನಾರು ವರ್ಷಗಳ ಹಿಂದೆ ನಾಗೂರು ಪರಿಸರದಲ್ಲಿ ಆರಂಭಗೊಂಡ ಕುಸುಮ ಸಮೂಹ ಸಂಸ್ಥೆಗಳು ಜನರ ಅಗತ್ಯಗಳಗೆ ತಕ್ಕಂತೆ ತನ್ನ ಉದ್ಯಮವನ್ನು ಮುಂದುವರಿಸಿಕೊಂಡು ಬಂದಿದೆ. ಕುಸುಮ ಹೋಮ್ಸ್ ಹಾಗೂ ಕುಸುಮ ಎಲೆಕ್ಟ್ರೀಕಲ್ಸ್ ಮೂಲಕ ಪರಿಚತವಾದ ಸಂಸ್ಥೆ ಗುಣಮಟ್ಟ ಅನ್ವರ್ಥದಂತೆ ಕಾರ್ಯನಿರ್ವಹಿಸುತ್ತಿದೆ. ಮುಂದೆ ಉದ್ಯೋಮದೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕುಸುಮ ಫೌಂಡೇಶನ್ ಆರಂಭಿಸಿತು. ಈ ಫೌಂಡೇಶನ್ ಮೂಲಕ ಪರಿಸರದ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಶ್ಲಾಘನಾರ್ಹ. ಸುಸಜ್ಜಿತ ಕಟ್ಟಡವಿಲ್ಲದೇ, ಮಕ್ಕಳ ಕೊರತೆಯಿಂದ ನಡೆಸುತ್ತಿದ್ದ ನಾಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಂಸ್ಥೆಯು ದತ್ತು ಸ್ವೀಕರಿಸಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ್ದರಿಂದ 2015ರಲ್ಲಿ 9 ಮಕ್ಕಳು 1ನೇ ತರಗತಿಗೆ ಸೇರುವಂತಾಗಿತ್ತು. (ಕುಂದಾಪ್ರ ಡಾಟ್ ಕಾಂ)

ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಹೊರತಾಗಿ ಇರುವ ಪ್ರತಿಭೆಯನ್ನು ಗುರುತಿಸುವುದು ಮತ್ತು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ ಗಾನಕುಸುಮ ಕಾರ್ಯಕ್ರಮ ಆಯೋಜಿಸಿ ಸಂಗೀತಾಸಕ್ತ ಮಕ್ಕಳನ್ನು ಹುರಿದುಂಬಿಸುವ ಕಾರ್ಯದಲ್ಲಿ ಕುಸುಮಾ ಫೌಂಡೇಶನ್ ತೊಡಗಿದೆ. ಇದರಿಂದ ಗ್ರಾಮೀಣ ಪರಿಸರದ ಮಕ್ಕಳಿಗೂ ಒಂದು ಉತ್ತಮ ವೇದಿಕೆ ದೊರಕಿದಂತಾಗಿದೆ. ಒಟ್ಟಿನಲ್ಲಿ ಉದ್ಯಮದೊಂದಿಗೆ ಸಾಮಾಜಿಕ ಬದ್ಧತೆಯನ್ನು ಮರೆಯದೇ, ತಾವು ಬೆಳೆಯುವುದರೊಂದಿಗೆ ಇತರರನ್ನು ಗುರುತಿಸುವ, ಬೆಳೆಸುವ ಕಾರ್ಯದಲ್ಲಿ ನಿರತರಾಗಿರುವ ಕುಸುಮ ಸಮೂಹ ಸಂಸ್ಥೆಯ ನಿರ್ದೇಶಕರು ಹಾಗೂ ಉದ್ಯೋಗಿಗಳ ಕಳಕಳಿ, ಬದ್ಧತೆ ಹಾಗೂ ಬದ್ಧತೆಯ ಹಿಂದಿನ ಶಕ್ತಿಯನ್ನು ಪ್ರಶಂಸಾರ್ಹ.

Exit mobile version