Kundapra.com ಕುಂದಾಪ್ರ ಡಾಟ್ ಕಾಂ

ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬ್ರಹ್ಮಾವರ:
ಆದರ್ಶವನ್ನು ಬದುಕಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಮತ್ತು ಮಕ್ಕಳಲ್ಲಿ ಕೂಡಾ ಪಾಲನೆ ಮಾಡಿದವರಲ್ಲಿ ನಿವೃತ್ತ ಶಿಕ್ಷಕ ಮಟಪಾಡಿ ಶಿವರಾಮ ಶೆಟ್ಟಿ ಅವರು ಇಂದಿನ ಜನರಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು ಹೇಳಿದರು.

ಅವರು ಮಂಗಳವಾರ ಬ್ರಹ್ಮಾವರ ಮಟಪಾಡಿಯ ನಿವೃತ್ತ ಶಿಕ್ಷಕ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೊರಗ ಕಾಲೋನಿಯ ಜನರಿಗೆ ನೆರವು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಕಾಲ ಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಭಾಗವಹಿಸಿದಲ್ಲಿ ಜೀವನ ಮೌಲ್ಯದ ಶಿಕ್ಷಣ ನೀಡಿದಂತಾಗುತ್ತದೆ ಎಂದರು.

ಮಟಪಾಡಿಯಲ್ಲಿ ಶಿವರಾಮ ಶೆಟ್ಟಿ ಅವರ ಮತ್ತು ಕುಟುಂಬಿಕರ ಜಾಗದಲ್ಲಿ ಸಾರ್ವಜನಿಕವಾಗಿ ರಸ್ತೆಯನ್ನು ನಿರ್ಮಿಸಿದ್ದು ಅದನ್ನು ಹಂದಾಡಿ ಗ್ರಾಮಪಂಚಾಯತಿ ಅಧ್ಯಕ್ಷೆ ಶಾರದಾ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪರಿಸರದ 20 ಕುಟುಂಬಗಳಿಗೆ ನಾನಾ ವಸ್ತು ಮತ್ತು ಸಲಕರಣೆ ಆರ್ಥಿಕ ನೆರವು ವಿದ್ಯಾರ್ಥಿಗಳೀಗೆ  ಆರ್ಥಿಕ ಪ್ರೋತ್ಸಾಹ ವಿತರಿಸಲಾಯಿತು.

ಶಿವರಾಮ ಶೆಟ್ಟಿ ಅವರ ಕುಟುಂಬದ ಸದಸ್ಯರಾದ ಮಹಾಬಲ ಶೆಟ್ಟಿ, ಬಸ್ರೂರು ರಾಜೀವ ಶೆಟ್ಟಿ, ಡಾ, ದೇವರಾಜ್, ಡಾ, ಸುರೇಂದ್ರ ಶೆಟ್ಟಿ,ಮನೋಜ್ ಕುಮಾರ್ ಶೆಟ್ಟಿ, ಹಂದಾಡಿ ಗ್ರಾಮಪಂಚಾಯತಿ ಉಪಾಧ್ಯಕ್ಷ  ಅಶೋಕ ಪೂಜಾರಿ, ಸದಸ್ಯೆ ಜ್ಯೋತಿ ಬಾಯಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಊರ ಜನರೊಂದಿಗೆ ಸಹ ಭೋಜನ ಜರುಗಿತು. ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿಕಾರ್ಯಕ್ರಮ ನಿರೂಪಿಸಿದರು.

Exit mobile version