ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ದೇವಾಡಿಗರು, ಓರ್ವ ಸಜ್ಜನ ರಾಜಕಾರಣಿ, ಸಾಮಾಜಿಕ ನ್ಯಾಯಕ್ಕಾಗಿ ದುಡಿದವರು. ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ, ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದವರು. ಓರ್ವ ಶಾಸಕನಾಗುವ ಎಲ್ಲಾ ಗುಣಗಳನ್ನು ಹೊಂದಿದವರು. ಅವರ ಅಗಲುವಿಕೆ ಸಮಾಜಕ್ಕೆ ಆದ ನಷ್ಟ ಎಂದು ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಹಿರಿಯ ಕಾಂಗ್ರೆಸ್ಸಿಗ ಕೆದರು ಸದಾನಂದ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜು ದೇವಾಡಿಗ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಮೊಳಹಳ್ಳಿ ದಿನೇಶ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುಮನ ಸಾಮಾಜಿಕ ಕಾರ್ಯಕರ್ತ ಗುಲ್ವಾಡಿ ಪ್ರಭಾಕರ ಶೆಟ್ಟಿ ಶ್ರದ್ಧಾಂಜಲಿಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದಿನೋಡ್ ಕ್ರಾಸ್, ಮಹಿಳಾ ಬ್ಲಾಕ್ ಅಧ್ಯಕ್ಷ ದೇವಕಿ ಪಣ್ಣನ್ನು, ಅನಗಳ್ಳಿ ಪಂಚಾಯತ್ ಅಧ್ಯಕ್ಷೆತೆ ಸವಿತಾ, ಕೆಡಿಪಿ ಸದಸ್ಯರಾದ ರಮೇಶ ಶೆಟ್ಟಿ, ಪಂಚಾಯತ್ ಸದಸ್ಯರಾದ ವಿಜಯಾದರ್ ಕೆನ್ಸಿ ಗೀತಾ, ಪುರಸಭಾ ಸದಸ್ಯರಾದ ಶ್ರೀಧರ್ ಕೇಳೀಗಾರ್. ಪ್ರಭಾವತಿ ಶೆಟ್ಟಿ, ಗಶಿ ರಾಜ್ ಪೂಜಾರಿ, ಅರೋಸ್ ಸುವರ್ಣ ಸದಾನಂದ ಖಾರ್ವಿ ಕಧರ ನಂದಿಬೆಟ್ಟು ಗ್ಯಾರಂಟಿ ಸಮಿತಿಯ ಸದಸ್ಯರಾದ ಗಣೇಶ್ ವಿ. ಆನಾ ಕರ್ವಾಲೋ, ಪ್ರಮುಖರಾದ ರೇವತಿ ಶೆಟ್ಟಿ, ರೋಶನ್ ಶೆಟ್ಟಿ, ಸೀಮಾ ಪೂಜಾರಿ, ಅರುಣ್ ಪಟೇಲ್ ಕೇಶವ ಭಟ್ ಸುರೀಶ್ ಪೂಜಾರಿ, ಜೋಪರ್ ಗದಲ್ಲೂ ರಿಯಾಜ್ ಕೋಡಿ ಅಶ್ವತ್ ಕುಮಾರ್ ಕೆ. ರಾಧಾ ಕಬ್ಬಿಗಾರ್ ವಿವೇಕಾನಂದ ಜೋಯ್ ರೆಬೆಲ್ಲೊ ಕಾರ್ತಿಕ್, ವಿನಯ ಎದಾಲ್ಡ್ ದಿಕೊಷ್ಟು ನಾನ್ ಸೋಜು ಕೋಣಿ ಇನ್ನಿತರರು ಉಪಸ್ಥಿತರಿದ್ದರು.