ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಬೈಂದೂರು ಹೋಬಳಿಯ 9 ಗ್ರಾಮಗಳ ಸುಮಾರು 55 ಅರ್ಹ ಬಡ ಫಲಾನುಭವಿಗಳಿಗೆ 94 ಸಿ ಹಾಗೂ 94 ಸಿಸಿ ಹಕ್ಕು ಪತ್ರ ವಿತರಿಸಿದರು.
ನಂತರ ಶಾಸಕರು ಮಾತನಾಡಿ, ಬೈಂದೂರು ಹೋಬಳಿಯಲ್ಲಿ ಅರ್ಹ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ಈಗಾಗಲೇ ವಿತರಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸಿ ಜನರ ಬಳಿ ಅಧಿಕಾರಿಗಳನ್ನು ಕರೆದುಕೊಂಡು ಹೋದ ಪರಿಣಾಮ ಸಣ್ಣ ಪುಟ್ಟ ನ್ಯೂನ್ಯತೆ ಇರುವ ಕಡಗಳನ್ನು ಸರಿ ಪಡಿಸಿ ಅರ್ಹರನ್ನು ಹುಡುಕಿ ಅವರಿಗೆ ಭೂಮಿ ಹಕ್ಕು ನೀಡುವ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ನಿರಂತರವಾಗಿ ನಡೆದು ಯಾವೊಂದು ಅರ್ಹ ಬಡ ಕುಟುಂಬ ಹಕ್ಕು ಪತ್ರ ವಂಚಿತರಾಗದೆ ಇರುವಂತೆ ಮಾಡಲಾಗುವುದು ಎಂದರು.

ಗೊಳಿಹೊಳೆ ಹಾಗೂ ಯಳಜಿತ್ ಗ್ರಾಮದ 32, ಹೇರೂರು ಗ್ರಾಮದ 04, ಜಡ್ಕಲ್ 04, ಕಾಲ್ತೊಡು 04, ಹೇರೆಂಜಾಲು, ನಾಡ, ಕಿರಿಮಂಜೇಶ್ವರ ಗ್ರಾಮದ ತಲಾ 01, 94 ಸಿ ಹಕ್ಕು ಪತ್ರ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ 08 ಫಲಾನುಭವಿಗಳಿಗೆ 94 ಸಿಸಿ ವಿತರಿಸಲಾಯ್ತು.
ತಹಸೀಲ್ದಾರ್ ರಾಮ ಚಂದ್ರಪ್ಪ, ಕಂದಾಯ ನಿರೀಕ್ಷಕರಾದ ಉಪೇಂದ್ರ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.