ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಸಹಕಾರ ಸೇವೆಯಲ್ಲಿನ ಅಪೂರ್ವ ಕೊಡುಗೆಗಾಗಿ ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ “ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ-2025” ಪ್ರದಾನಿಸಲಾಯಿತು. ಈ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮತ್ತು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೆ. ನರಸಿಂಹ ಹೊಳ್ಳ ಸ್ವೀಕರಿಸಿದರು.

ಜವುಳಿ & ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್, ಕರ್ನಾಟಕ ಸರಕಾರ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿಯಾದ ಆರ್. ಅಶೋಕ್, ಕನ್ನಡ ಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಇವರ ಘನ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ೦ಘದ ನಿರ್ದೇಶಕರಾದ ನಿತ್ಯಾನಂದ ಶೇರಿಗಾರ್, ನಾರಾಯಣ ಖಾರ್ವಿ, ಗೋಪಾಲ್ ಪೂಜಾರಿ ಹಾಗೂ ಸೀತಾರಾಮ ಉಪಸ್ಥಿತರಿದ್ದರು.