Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ರೋಟರಿ ಕ್ಲಬ್‌: ದೇಸೀ ನಾಯಿಗಳ ಸಂತಾನಹರಣ ಚಿಕಿತ್ಸಾ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಮದ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ರಿ. ಮಲ್ಪೆ, ಡಬ್ಲ್ಯೂ ವಿ.ಎಸ್ ಇಂಡಿಯಾ ಫ್ರೆಂಡೋ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಬೈಂದೂರು ಇದರ ಸಹಯೋಗದಲ್ಲಿ ದೇಸೀ ನಾಯಿಗಳ ಸಂತಾನಹರಣ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ಇಲ್ಲಿನ ರೋಟರಿ ಕ್ಲಬ್‌ನಲ್ಲಿ ನಡೆಯಿತು.

ಪಟ್ಟಣ ಪಂಚಾಯತ್‌ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ ಕಾರ್ಯಕ್ರಮ ಉದ್ಘಾಟಿಸಿದರು.

ನಿವೃತ್ತ ಪಶು ವೈದ್ಯಾಧಿಕಾರಿ ಶಂಕರ ಶೆಟ್ಟಿ ಮಾತನಾಡಿ, ಬೀದಿ ನಾಯಿಗಳ ಕಾಟ ಪ್ರತಿ ಗ್ರಾಮದಲ್ಲೂ ಅತ್ಯಧಿಕವಾಗಿದೆ.ಇವುಗಳ ನಿಯಂತ್ರಣಕ್ಕೆ ಕ್ರಿಯಾತ್ಮಕ ಯೋಜನೆಗಳ ಅಗತ್ಯವಿದೆ. ಈನಿಟ್ಟಿನಲ್ಲಿ ಇಂತಹ ಸಂಘಟನೆಗಳ ಪ್ರಯತ್ನ ಉತ್ತಮವಾಗಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಅಧಿಕಾರಿ ಐ. ನಾರಾಯಣ, ಪೊಂಡೋ ಫೌಂಡೇಶನ್ ಪ್ರಿಯಾಂಕ ಜೋನ್, ಜಿಲ್ಲಾ ಅಧ್ಯಕ್ಷ ತನ್‌ವೀ‌ರ್, ಚೈತ್ರಾ ಯಡ್ತರೆ, ರಾಜು ಕೆ. ಶ್ವೇತಾ, ಡಾ.ಚೇತನ್ ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.

Exit mobile version