Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಸಿ: ಮೊಬೈಲ್ ಟವರ್‌ನಲ್ಲಿದ್ದ ಎಂಟು ಎಕ್ಸೈಡ್ ಕಂಪೆನಿಯ ಬ್ಯಾಟರಿ ಕಳವು; ಪ್ರಕರಣ ದಾಖಲು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಇಲ್ಲಿನ ಕುಂಭಾಸಿ ಗ್ರಾಮದ ಮೊಬೈಲ್ ಟವರ್ ಒಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ‘ತೇಜ ಟೆಕ್ನಿಕಲ್ ಸರ್ವೀಸ್’ ಸಂಸ್ಥೆಯಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿರುವ ನಾಗಕುಮಾರ್ ಸಿ.ಆರ್. ಅವರು ಕುಂಭಾಸಿ ಗ್ರಾಮದ ಸರ್ವೇ ನಂಬ್ರ 12*11 ರಲ್ಲಿರುವ ಟವರ್‌ಗೆ ಕಳೆದ ಸೆಪ್ಟೆಂಬರ್‌ನಲ್ಲಿ 24 ಸೆಲ್‌ಗಳಿರುವ ಎಕ್ಸೈಡ್ ಕಂಪೆನಿಯ ಬ್ಯಾಟರಿ ಬ್ಯಾಂಕ್ ಅಳವಡಿಸಿದ್ದರು. ಈ ಟವರ್‌ನ ನಿರ್ವಹಣೆಯನ್ನು ಟೆಕ್ನೀಶಿಯನ್ ಅವಿನಾಶ್ ಶೆಟ್ಟಿ ಅವರಿಗೆ ವಹಿಸಲಾಗಿತ್ತು.

​ಫೆ.8 ರಂದು ಅವಿನಾಶ್ ಶೆಟ್ಟಿ ಅವರು ಪರಿಶೀಲನೆ ನಡೆಸಿದಾಗ ಬ್ಯಾಟರಿಗಳು ಸುಸ್ಥಿತಿಯಲ್ಲಿದ್ದವು. ಆದರೆ, ಫೆ.10 ರಂದು ಪುನಃ ಭೇಟಿ ನೀಡಿದಾಗ ಬ್ಯಾಟರಿ ಬ್ಯಾಂಕ್‌ನಲ್ಲಿದ್ದ 8 ಬ್ಯಾಟರಿಗಳನ್ನು ಕಿಡಿಗೇಡಿಗಳು ಕಳವು ಮಾಡಿರುವುದು ಕಂಡುಬಂದಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version