ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಲಾಡಿ ಗ್ರಾಮದ ಹಂದಕೊಡ್ಲು ಇಳಿಜಾರಿನಲ್ಲಿ ಬೈಕ್ ಬಿಟ್ಟು ರಸ್ತೆಗೆ ಉರುಳಿದ ಸವಾರ ಮೃತಪಟ್ಟ ಘಟನೆ ನಡೆದಿದೆ.
ಸಿದ್ದಾಪುರದಿಂದ ಆವರ್ಸೆಗೆ ಸಾಗುತ್ತಿದ್ದ ಆಟೋರಿಕ್ಷಾ ಹಂದಕೊಡ್ಲು ಸಾಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಇಳಿಜಾರಿನಲ್ಲಿ ಆಟೋರಿಕ್ಷಾ ಕಂಡು ಗಲಿಬಿಲಿಗೊಂಡು ಬೈಕ್‌ನ್ನು ಬಿಟ್ಟು ರಸ್ತೆಗೆ ನೆಗೆದಿದ್ದು, ನಂತರ ರಸ್ತೆಯಲ್ಲಿ ಉರುಳಿಕೊಂಡು ಹೋಗಿದ್ದಾರೆ.
ಬೈಕ್ ಆಟೋರಿಕ್ಷಾದ ಬಲಭಾಗದ ಸೇಫ್‌ಗೆ ಬಂದು ಬಡಿದಿತ್ತು. ರಸ್ತೆಯಲ್ಲಿ ಉರುಳಿ ಬಿದ್ದ ಬೈಕ್ ಸವಾರ ಕುಂಬಾರಮಕ್ಕಿ ಕಳಿಗೆ ಚಂದ್ರ ಶೆಟ್ಟಿ (63) ಗೆ ಗಂಭೀರ ಗಾಯಗೊಂಡಿದ್ದು, ಕೂಡಲೆ ಆಟೋರಿಕ್ಷಾ ಚಾಲಕ ಮತ್ತು ಪ್ರಯಾಣಿಕರು ಚಿಕಿತ್ಸೆಯ ಬಗ್ಗೆ ಹಾಲಾಡಿಯ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದು, ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

