ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದಕ್ಕೆ ಅವಾಚ್ಯವಾಗಿ ಕಮೆಂಟ್ ಮಾಡಿದ ಪ್ರಕಾಶ್ ಎಸ್(45) ಎಂಬಾತನ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.
ಫೆ.04 ಫೇಸ್ ಬುಕ್ ವಾರ್ತಾ ಭಾರತಿ ಪೇಜ್ ನಲ್ಲಿ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ತರಕಾರಿ ವ್ಯಾಪಾರ ಮಾಡುವ ಮಹಮ್ಮದ್ ರವರ ಸಂದರ್ಶನದ ಕುರಿತು ರಂಜಾನ್ ಕಥೆಯ ಇಂದಿನ ಹೀರೋ ಮಂಗಳೂರಿನ ಮಹಮ್ಮದ್ ಎಂಬ ಪೇಜ್ ನ್ನು ನೋಡುತ್ತಿದ್ದಾಗ, ಸದ್ರಿ ಫೇಜ್ ಗೆ ಪೇಸ್ ಬುಕ್ ನಲ್ಲಿ ಹೆಮ್ಮೆಯ ಕಾರ್ಯಕರ್ತ ಎಂಬುವವರು ಅವಾಚ್ಯವಾಗಿ ಕಮೆಂಟ್ ಮಾಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ. ಹೆಚ್ ಡಿ ಕುಲಕರ್ಣಿ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾದ ಜಯರಾಮ್ ಡಿ ಗೌಡ ನೇತೃತ್ವದ ಕುಂದಾಪುರ ಠಾಣಾ ಪಿ.ಎಸ್.ಐ ನಂಜಾನಾಯ್ಕ್ ಎನ್ (ಕಾ&ಸು), ಪಿ.ಎಸ್.ಐ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿಗಳಾದ ಸಂತೋಷ, ಮೋಹನ್, ಸಂತೋಷ ದೇವಾಡಿಗ, ಘನಶ್ಯಾಮ, ಅಣ್ಣಪ್ಪ, ಮಹಾಬಲ ಶೆಟ್ಟಿಗಾರ, ನಾಗಶ್ರೀ, ಗೌತಮರ ತಂಡ ಪ್ರಕರಣದ ಆರೋಪಿ ಪ್ರಕಾಶ್ ಎಸ್(45) ಮತ್ತಿಕೆರೆ, ಬೆಂಗಳೂರು ಈತನನ್ನು ದಸ್ತಗಿರಿ ಮಾಡಿ ನಂತರ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

