ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಡೇರಹೋಬಳಿ ನಿವಾಸಿ ಮಂಜುನಾಥ ಮೊಗವೀರ (72) ಅವರಿಗೆ ಸ್ಕೂಟರ್ ಢಿಕ್ಕಿಯಾಗಿ, ಗಾಯಗೊಂಡ ಘಟನೆ ಹೆಮ್ಮಾಡಿಯ ಸಂತೋಷನಗರ ಕ್ರಾಸ್ ಹತ್ತಿರ ಇತ್ತೀಚಿಗೆ ಸಂಭವಿಸಿದೆ.
ಗಾಯಗೊಂಡ ಮಂಜುನಾಥ ಅವರನ್ನು ಸ್ಕೂಟರ್ ಸವಾರ ಪ್ರವೀಣ್ ಹಾಗೂ ಸ್ಥಳೀಯರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

