ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 61 ಸರಣಿ ಕಾರ್ಯಕ್ರಮವು ಸೋಮವಾರದಂದು ಇಲ್ಲಿನ ಕೂರಾಡಿಯ ಬಿಎಂಎಂ ಪ್ರೌಢಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಇಲ್ಲಿನ ನಿವೃತ್ತ ಶಿಕ್ಷಕ ವಿಶ್ವನಾಥ್ ಎಂ. ಉದ್ಘಾಟಿಸಿ, ಮಾತನಾಡಿ, ದೀಪವು ಸದಾ ಕಾಲ ಪೂಜನೀಯ. ಅದು ಇತರರಿಗಾಗಿ ಉರಿಯುವುದೇ ವಿನಹ ಇತರರ ಯಶಸ್ಸನ್ನು ಕಂಡು ಉರಿದುಕೊಳ್ಳುವುದಿಲ್ಲ ಎಂದು ಶುಭ ಹಾರೈಸಿದರು.

ಮುಖ್ಯ ಅಧ್ಯಾಪಕರಾದ ಮಂಜುನಾಥ್ ಎಂ. ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಯಲ್ಲಿ ಸಂಸ್ಕಾರ ಮುಖ್ಯ ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾದ ನೀಲಾಂಬರ ಸುರೇಂದ್ರ ಅಡಿಗ ಅವರು ಪ್ರಾಸ ಪದಗಳನ್ನು ಕೊಟ್ಟು ಕವನಗಳನ್ನು ರಚಿಸಿದರು. ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ್ ಅವರು ಸ್ವರ ಏರಿಳಿತವು ಪ್ರಾಮುಖ್ಯ ಎಂದು ಅಭಿನಯಿಸಿ ತೋರಿಸಿದರು. ನಾಗೇಶ ಮಯ್ಯ ಅವರು ಕಥೆಗಳನ್ನ ರಚಿಸುವ ಬಗ್ಗೆ ವಿವರಿಸಿದರು. ನರಸಿಂಹ ತುಂಗ ಅವರು ನವರಸಗಳ ಬಗ್ಗೆ ವಿವರಿಸುತ್ತಾ ಯಕ್ಷಗಾನದ ಅಭಿನಯ ಮಾಡಿ ತೋರಿಸಿದರು. ಸ್ಥಳದಲ್ಲಿ ಕವನಗಳನ್ನು ರಚಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮಾಧ್ಯಮ ಮಿತ್ರ ನರಸಿಂಹ ಮೂರ್ತಿಯವರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಧ್ಯಾಪಕ ನಿಕೇಶ್ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಮಾಡಿದರು. ಒಟ್ಟಿನಲ್ಲಿ ಚಟುವಟಿಕೆ ಆಧಾರಿತ ಈ ಸಾಹಿತ್ಯ ಪ್ರೇರಣೆ ಯಶಸ್ವಿಯಾಯಿತು.