ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 116ನೇ ತಿಂಗಳ ಕಾರ್ಯಕ್ರಮ ಗೊಂಬೆ ಮನೆಯಲ್ಲಿ ಇತ್ತೀಚೆಗೆ ಜರುಗಿತು.
ಮಧುಸೂಧನ್ ಕಾಮತ್ ಮತ್ತು ಶ್ರೀಕಾಂತ್ ನಾಯಕ್ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ವಿಶ್ವನಾಥ್ ಶ್ಯಾನುಭಾಗ್ ಉಪ್ಪಿನಕುದ್ರು ಅವರನ್ನು ಗೌರವಿಸಲಾಯಿತು.
ಶ್ರೀ ಲಕ್ಷ್ಮೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಹಾಗೂ ಬಾಲ ಭಜನಾ ಮಂಡಳಿ, ಸಿದ್ಧಾಪುರ ಅವರಿಂದ ಭಜನಾ ಸಂಧ್ಯಾ ಕಾರ್ಯಕ್ರಮ ಅತ್ಯುತ್ತಮವಾಗಿ ಜರುಗಿತು.
ವೇದಿಕೆಯಲ್ಲಿ ಗುರು ಕೃಷ್ಣ ಕಾಮತ್, ಮಧುಸೂಧನ್ ಕಾಮತ್, ಶ್ರೀಕಾಂತ್ ನಾಯಕ್ ಸಿದ್ಧಾಪುರ, ಶಾರದಾ ನಾಯಕ್ ಐರ್‌ಬೈಲ್, ವಿಶ್ವನಾಥ್ ಶ್ಯಾನುಭಾಗ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು.
ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ನಾಗೇಶ್ ಶ್ಯಾನುಭಾಗ್ ನಿರೂಪಿಸಿ, ಉದಯ ಭಂಡಾರ್‌ಕಾರ್ ಧನ್ಯವಾದ ಸಮರ್ಪಿಸಿದರು.

