Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬೈಕ್ ಹಾಗೂ ಲಾರಿ ನಡುವೆ ಅಪಘಾತ – ಬೈಕ್‌ ಸವಾರ ಸಾವು

ಕುಂದಾಪ್ರ ಡಾಟ್‌ ಕಾಂ  ಸುದ್ದಿ.
ಕುಂದಾಪುರ:
ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರ 66ರ ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ ಎದುರು 12 ಗಂಟೆ ಸುಮಾರಿಗೆ ನಡೆದ ಬೈಕ್ ಹಾಗೂ ಕಂಟೇನರ್ ಲಾರಿ ನಡುವಿನ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಬೈರು ಎಂಬವರ ಪುತ್ರ ಜಯರಾಮ್ ಕಾಟ್ಕೋಟ್ (32) ಮೃತಪಟ್ಟವರು.

ಕಂಟೈನರ್ ಚಕ್ರದ ಅಡಿಯಲ್ಲಿ ಸಿಲುಕಿದ್ದ ಗಂಭೀರ ಗಾಯಗೊಂಡಿದ್ದ ಅಪರಿಚಿತ ಯುವಕನನ್ನು ಕೂಡಲೇ ಸ್ಥಳೀಯರಾದ ಆಟೋ ಚಾಲಕ ಹರೀಶ್ ಪೂಜಾರಿ ಹಾಗೂ ಗಂಗೊಳ್ಳಿಯ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹೊರತೆಗೆದರು.

ಉಡುಪಿ ಕಡೆ ರೋಗಿ ಒಬ್ಬರನ್ನು ಬಿಟ್ಟು ವಾಪಸ್ ಬರುತ್ತಿದ್ದು, ತಾಲೂಕು ಆಸ್ಪತ್ರೆ ಹೊನ್ನಾವರ ಇದರ ಆಂಬುಲೆನ್ಸ್ ಚಾಲಕ ನಾಗರಾಜ್ ನಾಯ್ಕ್ aವರಲ್ಲಿ ಗಾಯಾಳುವನ್ನು ಆಸ್ಪತ್ರೆ ಕೊಂಡೆಯಲು ವಿನಂತಿಸಿಲಾಯಿತು. ಕೂಡಲೇ ಗಾಯಾಳುವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಯುವಕನ ಪ್ಯಾಂಟ್ ಕೀಸೆಯಲ್ಲಿದ್ದ ಲೈಸೆನ್ಸ್  ಆಧಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಬೈರು ಎಂಬವರ ಪುತ್ರ 32 ವರ್ಷ ಪ್ರಾಯದ ಜಯರಾಮ್ ಕಾಟ್ಕೋಟ್ ಎಂದು ತಿಳಿದಿದೆ. ಅವರು ಇಬ್ರಾಹಿಂ ಗಂಗೊಳ್ಳಿ ಇವರ ಆಂಬುಲೆನ್ಸ್ ಚಾಲಕರ ಗ್ರೂಪ್ ಕೆ ಎ ಡಿ ಓ ಹಾಗೂ ಏಕೆ ಎ ಆರ್ ಎಸ್ ನಲ್ಲಿ ಹಾಕಿದ್ದು ಕೂಡಲೇ ವ್ಯಕ್ತಿಯ ಸಂಬಂಧಿಕರಿಗೆ ವಿಷಯ ತಿಳಿಸಲು ಅನುಕೂಲವಾಯಿತು. ಸಂಜೆ ವೇಳೆಗೆ ಕುಟುಂಬಸ್ಥರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದರು. ಶವಮಾಜರು ಪ್ರಕ್ರಿಯೆ ಹಾಗೂ ಕಾನೂನು ಪ್ರಕ್ರಿಯೆಯನ್ನು ಗಂಗೊಳ್ಳಿ ಪೊಲೀಸರು ನಡೆಸುತ್ತಿದ್ದಾರೆ. ಮೃತ ವ್ಯಕ್ತಿ ಉಡುಪಿಯಲ್ಲಿ ಕೆಲಸ ಮಾಡುವವರಾಗಿದ್ದು ಮದುವೆಯಾಗಿ ಇಬ್ಬರು ಪುಟ್ಟ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

Exit mobile version