Kundapra.com ಕುಂದಾಪ್ರ ಡಾಟ್ ಕಾಂ

ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಪೂರ್ವಸಿದ್ಧತಾ ಮಾಹಿತಿ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಜೆಸಿಐ ಹಾಲಾಡಿ ಘಟಕದ ವತಿಯಿಂದ ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯಲ್ಲಿ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪರೀಕ್ಷೆಗೆ ತಯಾರಾಗುವುದು ಹೇಗೆ ಎನ್ನುವ ಕುರಿತು ಮಾಹಿತಿ ಶಿಬಿರವು ನಡೆಯಿತು.

ಖ್ಯಾತ ತರಬೇತುದಾರರಾದ ಜೆಸಿ ಕೃಷ್ಣ ಮೂರ್ತಿ ಹಾಯ್ಕಾಡಿ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾರ್ಗದರ್ಶನ ನೀಡಿದರು.

ಹಾಲಾಡಿ ಜೆಸಿಐ ಘಟಕದ ಅಧ್ಯಕ್ಷರಾದ  ಪ್ರದೀಪ ಹಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಉದಯ್ ಕುಮಾರ್ .ಬಿ., ಗೀತಾ ನಾಯಕ್, ಲೇಡಿ ಜೆಸಿಐ ಪ್ರೆಸಿಡೆಂಟ್  ಅವಶ್ಯ ಶೆಟ್ಟಿ, ಜೆಸಿ ಉಪಾಧ್ಯಕ್ಷರಾದ ಜೆಸಿ ಕೃಷ್ಣ ಭಟ್ ಹಾಲಾಡಿ,  ಉಪಸ್ಥಿತರಿದ್ದರು.

ಹಾಲಾಡಿ ಬ್ರೈಟ್ ಪರ್ಲ್ ವಿದ್ಯಾಸಂಸ್ಥೆಯ ಜೆಸಿ ಆಶಾ ಆರ್ ಕುಲಾಲ್, ಜೆಸಿ ದೀಪಾ ಶೆಟ್ಟಿ ಹಾಲಾಡಿ, ಜೆಸಿ ಮಂಜುಳಾ ಶೆಟ್ಟಿ ಶಾಲಾ ಸಹಶಿಕ್ಷಕಿ ಸವಿತಾ  ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.

Exit mobile version