ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ, ಗೊಂಬೆಗಳ ಮತ್ತು ಆಟಿಕೆಗಳ ವೈವಿಧ್ಯಮಯ ಪ್ರದರ್ಶನವು ಸಂಸ್ಥೆಯ ಕಾರ್ಯದರ್ಶಿಗಾಳಾದ ಕೆ. ರಾಧಕೃಷ್ಣ ಶೆಣೈ ಅವರು ದೀಪ ಬೆಳಗಿಸುವುದರ ಮುಖೇನ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಅವರು ಉಪಸ್ಥಿತರಿದ್ದರು.
ಚಿತ್ತಾಕರ್ಷವಾದ ಗೊಂಬೆಗಳು ಮತ್ತು ಆಟಿಕೆಗಳೊಂದಿಗೆ, ಪುಟಾಟಿಗಳ ಸಂಗೀತ ನರ್ತನವು ಎಲ್ಲರ ಮನಸೊರೆಗೊಂಡವು.ಸಂಧ್ಯಾ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಶಿಕ್ಷಕಿಯರಾದ ಸುನೀತಾ ಡಿ. ಎಲ್ಲರನ್ನೂ ಸ್ವಾಗತಿಸಿ, ವಂದನಾರ್ಪಣೆ ಗೈದರು.

