Kundapra.com ಕುಂದಾಪ್ರ ಡಾಟ್ ಕಾಂ

ಐಎಂಜೆಐಎಸ್‌ಸಿನ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶೇಷ ಪ್ರೇರಣದಾಯಕ ಕಾರ್ಯಕ್ರಮ 

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುತ್ ರೆಡ್ ಕ್ರಾಸ್ ಘಟಕದ ವತಿಯಿಂದ “ಸಂಕಲ್ಪದಿಂದ ವಿಜಯದೆಡೆಗೆ- ಭಾರತೀಯ ತಂತ್ರಜ್ಞಾನದ ಉತ್ಕರ್ಷ” ಎಂಬ ವಿಷಯದ ಕುರಿತಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರಕ್ಷಣಾ ಸಚಿವಾಲಯದ ಡಿಆರ್‌ಡಿಓ ಸಂಸ್ಥೆಯ ಜಯಪ್ರಕಾಶ್ ರಾವ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಅವರು ಭಾರತದಲ್ಲಿ ರಕ್ಷಣಾ ವಲಯದ ವೇಗವಾದ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ “ಆಪರೇಷನ್ ಸಿಂಧೂರ್” ಕುರಿತು ವಿವರಿಸಿದರು. ದೇಶ ಸೇವೆಗೆ ಯುವಕರು ರಕ್ಷಣಾ ಪಡೆಗಳಿಗೆ ಸೇರುವಂತೆ ಕರೆ ನೀಡಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಯುವಕರನ್ನು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ಉದಾಹರಿಸಿ, ವಿದ್ಯಾರ್ಥಿಗಳು ಕನಸು ಕಾಣಬೇಕು ಮತ್ತು ಅದನ್ನು ಸಾಧಿಸಲು ಪರಿಶ್ರಮಿಸಬೇಕು ಎಂದು ತಿಳಿಸಿದರು. 

 ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಬಿಸಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ವರ್ಣ ರಾಣಿ, ಉಪನ್ಯಾಸಕ ಸಂಯೋಜಕಿ ಶ್ರೀಮತಿ ಭಾರತಿ ಗಾಣಿಗ, ವಿದ್ಯಾರ್ಥಿ ಸಂಯೋಜಕರಾದ ಸಿಂಚನ, ವಾಸುದೇವ್ (III BCA) ಮತ್ತು ಪ್ರವೀಣ್ (II BCA) ಉಪಸ್ಥಿತರಿದ್ದರು.

ಸಿಂಚನ ತೃತೀಯ ಬಿಸಿಎ ಅವರು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲರು ಅಧ್ಯಕ್ಷೀಯ ಮಾತನಾಡಿದರು. ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿ ದೇಶಭಕ್ತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಮಹತ್ವದ ಅರಿವು ಪಡೆದುಕೊಂಡರು.

Exit mobile version