Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಈಜಲು ತೆರಳಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಾರಾಹಿ ನದಿಗೆ ಈಜಲು ತೆರಳಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ.

ಉಳ್ಳೂರು-74 ಗ್ರಾಮದ ನಿಡುಕೋಡು ಸುಧೀರ ಶೆಟ್ಟಿ (26) ಅವರು ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ವಾರಾಹಿ ನದಿಗೆ ಫೆ. 15ರಂದು ಈಜಾಡಲು ತೆರಳಿದ್ದರು. ಈಜಲು ಸರಿಯಾಗಿ ಬಾರದ ಇರುವುದರಿಂದ ನೀರಿನಲ್ಲಿ ಮುಳುಗಿದರು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಫೆ.21ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಮೃತ ಸುಧೀರ ಶೆಟ್ಟಿ ಅವರು ಉಳ್ಳೂರು-74 ಗ್ರಾಮದ ಶ್ರೀ ಬನಶಂಕರಿ ಯುವಕ ಮಂಡಲದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸುಧೀರ ಶೆಟ್ಟಿ ಅವರು ಖಾಸಗಿ ಕಂಪನಿಯೊಂದರಲ್ಲಿ ರೈಟರ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version