Kundapra.com ಕುಂದಾಪ್ರ ಡಾಟ್ ಕಾಂ

ಮುನಿಯಾಲು ಸಂಜೀವಿನಿ ಗೋಧಾಮದ ಶ್ರೀಮನ್ನಾಗಮಂಡಲ ಸಂಪನ್ನ: ಸಹಸ್ರಾರು ಮಂದಿ ಭಕ್ತ ಸಮೂಹ ಭಾಗಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಕೃಷಿಲೋಕ ಮುನಿಯಾಲಿನ ಗೋಧಾಮದಲ್ಲಿ ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ‌ ಶನಿವಾರ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆದ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ಶನಿವಾರ ರಾತ್ರಿ ಸಂಪನ್ನಗೊಂಡಿತು.

ಶ್ರೀ ಭವಾನಿ ಭೋಜನಾಲಯದಲ್ಲಿ ನಡೆದ ಮಹಾ ಅನ್ನಸಂತರ್ಪಣೆಯನ್ನು ಸಹಸ್ರಾರು ಮಂದಿ ಸ್ವೀಕರಿಸಿ ಗೋಧಾಮದ ಸುಂದರ ಪ್ರಕೃತಿಯ ಪದತಲದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿದ್ವಾನ್‌ ಕೊರಂಗ್ರಪಾಡಿ ಕೆ.ಪಿ. ಕುಮಾರಗುರು ತಂತ್ರಿಗಳ ನೇತ್ರತ್ವದಲ್ಲಿ ವಾಸುದೇವ ಭಟ್‌ ಅವರ ಸಹಯೋಗದಲ್ಲಿ ಪಾತ್ರಿಗಳಾದ ರಾಮಚಂದ್ರ ಕುಂಜಿತ್ತಾಯ ಹಾಗೂ ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯ ಅವರ ಮೇಳದೊಂದಿಗೆ ಹಾಲಿಟ್ಟು ಸೇವೆ, ಏಕಪವಿತ್ರ ಶೀಮನ್ನಾಗಮಂಡಲ ಸೇವೆ ನಡೆಯಿತು.  

ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್‌. ಆಚಾರ್‌, ಅನುಷಾ ಆಚಾರ್‌, ಪ್ರಜ್ವಲ್‌ ಆಚಾರ್‌, ಪೂಜಾ ಆಚಾರ್‌, ತೇಜಸ್‌ ಆಚಾರ್‌, ರಕ್ಷತ್‌ ಆಚಾರ್‌ ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋಧರ ಶರ್ಮ ಬಾರ್ಕೂರು, ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

Exit mobile version