ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಹಾಲಾಡಿ ಗ್ರಾಮದ ಹಿಂದೂ ರುದ್ರಭೂಮಿ ಆವರಣದಲ್ಲಿ ಶ್ರಮದಾನ ಆಯೋಜಿಸಲಾಗಿತ್ತು. ಜೆಸಿಐ ಸದಸ್ಯರು ಸ್ಮಶಾನದ ಆವರಣದಲ್ಲಿ ಬೆಳೆದಿದ್ದ ತ್ಯಾಜ್ಯ ಗಿಡಗಳನ್ನು ಕಡಿದು, ಕಟ್ಟಿಗೆಗಳನ್ನು ಕೂಡಿ ಇಟ್ಟರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿದರು.
ಜೆಸಿಐ ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಪ್ರದೀಪ್ ಹಾಲಾಡಿ ಮಾತನಾಡಿ, ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಪ್ರತಿ ತಿಂಗಳು ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಸುಂದರ ಪರಿಸರ ನಿರ್ಮಾಣ ಮಾಡಲು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜೆಸಿಐ ಉಪಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಹಾಲಾಡಿ ಮಾತನಾಡಿ, ಜೆಸಿಐ ಹಾಲಾಡಿ ವಾರಾಹಿ ಸ್ವಚ್ಛತಾ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಸಿಐ ಘಟಕದ ಕಾರ್ಯದರ್ಶಿ ಅಶೋಕ್ ಆಚಾರಿ ಹಾಲಾಡಿ, ಕೋಶಾಧಿಕಾರಿಯಾದ ಮಹೇಶ್ ಹಾಲಾಡಿ, ಪದಾಧಿಕಾರಿಗಳಾದ ಕೃಷ್ಣ ಭಟ್, ನಾಗೇಶ್ ಕಿಣಿ, ರಾಘವೇಂದ್ರ ಕುದ್ರುಬೆಟ್ಟು, ಮಂಜುಳ ಶೆಟ್ಟಿ, ಆಶಾ ಕುಲಾಲ್, ಜೆಸಿಐ ಸದಸ್ಯರು ಪಾಲ್ಗೊಂಡಿದ್ದರು.