Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಅಭಿವೃದ್ಧಿಯಲ್ಲಿ ಹೊಸಾಡು ಸುಬ್ರಾಯ ಶೇರುಗಾರ್ ಅವರ ಕೊಡುಗೆ ಅಪಾರ: ಜೆ. ಕೃಷ್ಣ ಪಾಲೇಮಾ‌ರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಬೈಂದೂರು ಅಭಿವೃದ್ಧಿಯಲ್ಲಿ ಹೊಸಾಡು ಸುಬ್ರಾಯ ಶೇರುಗಾರ್ ಅವರ ಕೊಡುಗೆ ಅಪಾರ ಎಂದು ಮಾಜಿ ಸಚಿವ ಜೆ. ಕೃಷ್ಣ ಪಾಲೇಮರ್ ಹೇಳಿದರು.

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಜೈಸಿರಿ-2026ರ ಪ್ರಯುಕ್ತ ಆಯೋಜಿಸಿದ ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಕರಣೆಯ ಸಾಂಸ್ಕೃತಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಲೆ ಮತ್ತು ಸಾಹಿತ್ಯಕ್ಕೆ ಉಡುಪಿ ಜಿಲ್ಲೆ ದೇಶದಲ್ಲಿಯೇ ಖ್ಯಾತಿ ವಡೆದಿದ್ದು, ಈ ಜಿಲ್ಲೆಯು ಅನೇಕ ಪ್ರತಿಭಾವಂತರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ. ಬೈಂದೂರಿನ ಸುರಭಿ ಕೂಡ ತನ್ನದೇ ಆದ ಸಮಾನ ಲೋಕಕಟ್ಟಿಕೊಂಡು ವಿಶೇಷವಾಗಿ ಈ ಭಾಗದ ಮಕ್ಕಳಿಗೆ ಬಾಲ್ಯದಿಂದಲೇ ಸಾಂಸ್ಕೃತಿಕವಾಗಿ ಬೆಳೆಸುತ್ತಿರುವುದು ಎಂದರು.

ಹೃದ್ರೋಗ ತಜ್ಞ ಡಾ. ಎಚ್. ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ನೃತ್ಯಗುರು ನಟರಾಜ ಗಂಗೊಳ್ಳಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಡಾ. ಶಿವರಾಮ ಕಾರಂತ ಬಾಲ ಪ್ರಶಸ್ತಿ ಪುರಸ್ಕೃತೆ ತ್ರೀಷಾ ಅವರನ್ನು ಗೌರವಿಸಲಾಯಿತು.

ಸೇವಾ ಸಂಗಮ ಶಿಶುಮಂದಿರ ಅಧ್ಯಕ್ಷ ಮಂಜುನಾಥ ಶೆಟ್ಟಿ, ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ನಾಕಟ್ಟೆ ನಾಗರಾಜ ಶೆಟ್ಟಿ, ಭೈಂದೂರು ಸಿಟಿ ಬಿಸಿಐ ಅಧ್ಯಕ್ಷೆ ಚೈತ್ರಾ ಸತೀಶ್‌, ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ರಾಮಕೃಷ್ಣ ಪಾರ್ವತಿ ಸುಬ್ರಾಯ ಶೇರುಗಾರ್, ಪ್ರೇಮಾ ಪ್ರಕಾಶ್, ಸುಜಾತಾ, ಸುಧಾಕರ ಪಿ. ಇದ್ದರು.

ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಅಧ್ಯಕ್ಷ ಆನಂದ ಮದ್ದೋಡಿ ಪ್ರಾಸ್ತಾವಿಸಿದರು. ರಾಘವೇಂದ್ರ ಕೆ. ಮತ್ತು ಸಂದೀಪ್ ದೇವಾಡಿಗ ನಿರೂಪಿಸಿ, ಲಕ್ಷ್ಮಣ ಕೊರಗ ವಂದಿಸಿದರು. ನಂತರ ಪ್ರೊ. ಕೃಷ್ಣಗೌಡ ಮತ್ತು ತಂಡದವರಿಂದ ಹಾಸ್ಯೋತ್ಸವ ನಡೆಯಿತು.

Exit mobile version