Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶಾಸ್ತ್ರಿ ಸರ್ಕಲ್‌ನ ಪೊಲೀಸ್ ಚೌಕಿ ಬಳಿ ಸುಮಾರು 45ರಿಂದ 50 ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಅವರು ಬೇರೆ ಎಲ್ಲಿಂದಲೋ ಕೂಲಿ ಕೆಲಸಕ್ಕೆ ಬಂದಿರುವಂತೆ ಕಾಣುತ್ತಿದ್ದು, ಫೆ. 25ರ ರಾತ್ರಿಯಿಂದ ಫೆ. 26ರ ಬೆಳಗ್ಗಿನ ಮಧ್ಯೆ ಅವರು ಯಾವುದೋ ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ.

ಗೋಧಿ ಮೈ ಬಣ್ಣ, ಸುಮಾರು 55 ಅಡಿ ಎತ್ತರವಿದ್ದು, ಸಪೂರ ಶರೀರ, ತಿಳಿ ಆಕಾಶ ನೀಲಿ ಬಣ್ಣದ ಟೀ ಶರ್ಟ್‌ ಹಾಗೂ ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬಿಳಿ -ಕಪ್ಪು ಗೆರೆ ಇರುವ ಶಾಲು ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು.

ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version