ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಸಿಐ ಭಾರತದ ನಿರ್ದೇಶನದಂತೆ ಸದ್ದಿಲ್ಲದೆ ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಗುರುವಾರದಂದು ಯಡ್ತರೆ ಮೊಗವೀರ ಭವನದಲ್ಲಿ ನಡೆಯಿತು.

ಖಂಬದಕೋಣೆ ಪಂಚಾಯಿತಿಯ ಗ್ರೇಡ್ 2 ಕಾರ್ಯದರ್ಶಿಯಾಗಿ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಲಕ್ಷ್ಮಣ ಹಾಗೂ ಬೈಂದೂರು ಪಟ್ಟಣಪಂಚಾಯತ್‌ನಲ್ಲಿ 24 ವರ್ಷಗಳಿಂದ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಇವರನ್ನು, ಅವರು ಜನಪರವಾಗಿ ಮಾಡಿದ ಸೇವೆಯನ್ನು ಗುರುತಿಸಿ ಜೆಸಿಐ ಬೈಂದೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಬೈಂದೂರು ಸಿಟಿ ಇದರ ಅಧ್ಯಕ್ಷರಾದ ಎಚ್‌ಜಿಎಫ್ ಚೈತ್ರ ಸತೀಶ್, ನಿಕಟಪೂರ್ವ ಅಧ್ಯಕ್ಷರಾದ ಎಚ್‌ಜಿಎಫ್ ರಾಜು ಕೆ. ಮೊಗವೀರ, ಕಾರ್ಯದರ್ಶಿ ಎಚ್‌ಜಿಎಫ್ ಪ್ರೇಮ ವಿ. ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಸೂರ್ಯ ಕಾಂತಿ, ಸ್ಥಾಪಕ ಅಧ್ಯಕ್ಷರಾದ ಮಣಿಕಂಠ, ಪೂರ್ವಾಧ್ಯಕ್ಷರಾದ ಸವಿತಾ ದಿನೇಶ್ ಹಾಗೂ ಜೆಸಿಐ ಬೈಂದೂರು ಸಿಟಿ ಇದರ ಸರ್ವ ಸದಸ್ಯರು ಭಾಗವಹಿಸಿದ್ದರು.