Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಟ್ರೆಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಕುಂದಾಪುರದಲ್ಲಿ ಮಯೂರ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶುಭಶ್ರೀ ಕಾರಂತ್ (53) ಸಾವನ್ನಪ್ಪಿದವರು.

ಕುಂದಾಪುರದಲ್ಲಿ ಶುಭಶ್ರೀ ಅವರ ಜಿಮ್ ಕ್ಲಾಸಿನ ಸ್ನೇಹಿತರು 8-10 ಮಂದಿ ಒಟ್ಟಾಗಿ ಹೊಸಂಗಡಿಯ ಮೆಟ್ಕಲ್ ಗುಡ್ಡಕ್ಕೆ ಟ್ರೆಕ್ಕಿಂಗ್’ಗಾಗಿ ತೆರಳಿದ್ದರು. ಅಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಬಾಗಿಮನೆ ವರಾಹಿ ಹೊಳೆಯಲ್ಲಿ ವಾಯು ವಿಹಾರಕ್ಕೆ ಸ್ನೇಹಿತರೊಂದಿಗೆ ತೆರಳಿದ್ದರು. ಹೊಳೆಯ ಕಲ್ಲಿನ ಮೇಲೆ ಕುಳಿತಿದ್ದಾಗ ಒಮ್ಮೇಲೆ ನೀರು ಏರಿ ಬಂಡೆ ಕಲ್ಲಿನ ಮೇಲೆ ಕುಳಿತಿದ್ದ ಶುಭ ಕಾರಂತ್ ಆಕಸ್ಮಿಕ ಕಾಲು ಜಾರಿ ಹೊಳೆಯ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿದ್ದರು. ಕೂಡಲೇ ಜೊತೆಯಲ್ಲಿ ಇದ್ದವರು ಮೇಲಕ್ಕೆ ತಂದು ಹಾಲಾಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದನ್ನು ದೃಢಪಡಿಸಿದರು. ಅಲ್ಲಿಂದ ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದು ಪ್ರಕರಣ ದಾಖಲಾಗಿದೆ.

Exit mobile version