Kundapra.com ಕುಂದಾಪ್ರ ಡಾಟ್ ಕಾಂ

ಬೀಳ್ಕೊಡುಗೆ ಸಮಾರಂಭದಲ್ಲಿ ಸಹಕಾರ ನೀಡಿದವರನ್ನು ಸ್ಮರಿಸಿ ಗೌರವಿಸಿದ ಶಿಕ್ಷಕ ಆನಂದ ಮದ್ದೋಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ  ಆನಂದ ಮದ್ಯೋಡಿ ಅವರ ಬೀಳ್ಕೊಡುಗೆ ಸಮಾರಂಭ –ಆನಂದಾಭಿನಂದನಾ ಕಾರ್ಯಕ್ರಮದ ನಡುವೆ, ತಮ್ಮ ಬದುನುದ್ದಕ್ಕೂ ಸಹಕಾರಿ ನೀಡಿದವರನ್ನೆಲ್ಲಾ ಗುರುತಿಸಿ ಗೌರವಿಸುವ – ಅಭಿವಂದನೆ ಎಂಬ ಅಪರೂಪದ ಕ್ಷಣಕ್ಕೆ ಭಾನುವಾರ ರತ್ತುಬಾಯಿ ಜನತಾ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸದ ಕಾರ್ಯಕ್ರಮ ಸಾಕ್ಷಿಯಾಯಿತು.

ಇದು ನಡೆದದ್ದು ಶ್ರೀ ವಿ.ವಿ.ವಿ ಮಂಡಳಿ ರಿ. ಹೆಮ್ಮಾಡಿ, ರತ್ತುಬಾಯಿ ಜನತಾ ಪ್ರೌಢಶಾಲೆ ಬೈಂದೂರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಬಂಧುಮಿತ್ರರ ವತಿಯಿಂದ ಮತ್ತು ಅಭಿವಂದನಾ ಸಮಾರಂಭದಲ್ಲಿ.

ಶ್ರೀ ವಿ.ವಿ.ವಿ ಮಂಡಳಿ ರಿ. ಹೆಮ್ಮಾಡಿ ಅಧ್ಯಕ್ಷರು, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಆನಂದ ಮದ್ಯೋಡಿ ದಂಪತಿಗಳನ್ನು ಶಾಲೆಯ ವತಿಯಿಂದ ಸಮ್ಮಾನಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ.  ನಮ್ಮ ಉತ್ತಮ ನಡವಳಿಕೆ ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತದೆ. ಸಾರ್ಥಕ ಸೇವೆ ನಿವೃತ್ತಿ ಬಳಿಕವೂ ಸಂತೃಪ್ತಿ ನೀಡುತ್ತದೆ. ಆನಂದ ಮದ್ದೋಡಿಯವರು ಸೇವೆಯಲ್ಲಿರುವಷ್ಟೂ ಕಾಲ ಯಾವುದೇ ನ್ಯೂನತೆಗಳಿಲ್ಲದೇ ಆಡಳಿತ ಮಂಡಳಿ ಸಹೋದ್ಯೋಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದಲ್ಲದೇ ವಿದ್ಯಾರ್ಥಿಗಳ ಪ್ರೀತಿಗೂ ಪಾತ್ರರಾಗಿದ್ದರು ಎಂದರು.

ನಿವೃತ್ತ ಮುಖ್ಯೋಪಧ್ಯಾಯ ಆನಂದ ಮದ್ಯೋಡಿ ಮಾತನಾಡಿ, ಬದುಕಿಗಾಗಿ ಆರಿಸಿಕೊಂಡ ವೃತ್ತಿ ಸಮಾಜದಲ್ಲಿ ಗುರುತಿಸಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ. ಸಹಕರಿಸಿ ನನ್ನನ್ನು ಬೆಳೆಸಿದ ಸರ್ವರು ಯಶಸ್ಸಿನ ಪಾಲುದಾರರು ಎಂದರು.

https://www.youtube.com/live/qh2j48TxhgI?si=6feRshTxQIeOytYx .

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿ.ವಿ.ವಿ ಮಂಡಳಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಮಿಥುನ್ ಶೆಟ್ಟಿ ಯಡ್ತರೆ, ನಿವೃತ್ತ ಮುಖ್ಯ ಶಿಕ್ಷಕ ವಿಶ್ವೇಶ್ವರ ಅಡಿಗ, ನಿವೃತ್ತ ಬ್ಯಾಂಕ್ ಅಧಿಕಾರಿ ಗೋವಿಂದ ಸುಬ್ರಾಯ ಮದ್ಯೋಡಿ, ಡಾ. ಪ್ರಭಾಕರ ಎಚ್. ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು, ಶ್ರೀರಾಮ ವಿವಿದೋದ್ದೇಶ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶೇರುಗಾರ್ ಬಿಜೂರು, ಉದ್ಯಮಿ ವೆಂಕಟರಮಣ ಬಿಜೂರು ಗ್ಯಾರೇಜ್ ಮಾಲಕರ ಸಂಘ ಬೈಂದೂರು ಅಧ್ಯಕ್ಷ ಕೃಷ್ಣಯ್ಯ ಮದ್ಯೋಡಿ, ಡಾ. ಸುಬ್ರಹ್ಮಣ್ಯ ಭಟ್, ಗೋಪಾಲ ಶೆಟ್ಟಿ, ಮೂರೂರು, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕಿರಣ ಹೆಗ್ಡೆ, ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಪಿ.ಯಡ್ತರೆ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ, ಸುರಭಿ ಸಂಸ್ಥೆಯ ನಿರ್ದೇಶಕ ಸುಧಾಕರ ಪಿ. ಬೈಂದೂರು, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಚೈತ್ರ ಸತೀಶ್ ದಯಾನಂದ ಶೆಟ್ಟಿ, ಅಂಬೇಡ್ಕರ ಮಹಿಳಾ ಸಂಘದ ಅಧ್ಯಕ್ಷ ಸುಶೀಲಾ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ನಾರಾಯಣ ಪೋಷಕರ ಪ್ರತಿನಿಧಿ ವಿನಯಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಾಗರತ್ನ ಎಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ ಮಾಕೋಡಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ಹಾಗೂ ಆನಂದ ಮದ್ದೋಡಿ ಅವರನ್ನು ಶಾಲೆಯ ವತಿಯಿಂದ ಅಭಿಮಾನಿಗಳಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಮ್ಮಾನಿಸಲಾಯಿತು.

ಆನಂದ ಮದ್ದೋಡಿ ಅವರಿಗೆ ಹಿತೈಶಿಗಳು ಬಂಧು ಮಿತ್ರರು ಅಭಿನಂದಿಸಿದರು. ಆ ಬಳಿಕ ಆನಂದ ಮದ್ದೋಡಿ ಅವರು ತಮ್ಮ ಬದುಕಿನಲ್ಲಿ ವಿವಿಧ ರೀತಿಯ ಸಹಕಾರ ನೀಡಿದವರನ್ನು ಗುರುತಿಸಿ ಗೌರವಿಸಿದರು.

ರತ್ತುಬಾಯಿ ಜನತಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಕಾಶ ಮಾಕೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ವಿ.ವಿ.ವಿ ಮಂಡಳಿ ರಿ. ಹೆಮ್ಮಾಡಿ ನಿರ್ದೇಶಕ ರಘುರಾಮ ಕೆ. ಪೂಜಾರಿ ಸ್ವಾಗತಿಸಿ, ಶಿಕ್ಷಕ ರಾಮಕೃಷ್ಣ ದೇವಾಡಿಗ ಹಾಗೂ ಗುರುರಾಜ್ ಎಸ್. ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಚೈತ್ರ ಸತೀಶ್ ವಂದಿಸಿದರು.

Exit mobile version