ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಯಲ್ಲಿ ಒಟ್ಟು 4 ರ‍್ಯಾಂಕ್‌ಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ.
ಕೊಲ್ಲೂರು ಸಮೀಪದ ಮುದೂರಿನ ಶೀನ ಪೂಜಾರಿ ಹಾಗೂ ವಿಶಾಲು ದಂಪತಿಗಳ ಪುತ್ರಿ ಶ್ರೇಯಾ ಬಿ.ಕಾಂ. ಪದವಿಯಲ್ಲಿ 2ನೇ ರ‍್ಯಾಂಕ್, ಕೋಣಿಯ ಶಂಕರ್ ಮೊಗವೀರ ಹಾಗೂ ಶಾಂತಾ ದಂಪತಿಗಳ ಪುತ್ರಿ ಸುಹಾನಿ ಬಿ.ಬಿ.ಎ. ಪದವಿಯಲ್ಲಿ 3ನೇ ರ‍್ಯಾಂಕ್, ಅಂಪಾರು ನೆಲ್ಲಿಕಟ್ಟೆಯ ಪ್ರಭಾಕರ್ ಪಂಗಡಗಾರ ಹಾಗೂ ಶೋಭಾ ದಂಪತಿಗಳ ಪುತ್ರಿ ನಿಖಿತಾ ಬಿ.ಸಿ.ಎ. ಪದವಿಯಲ್ಲಿ 6ನೇ ರ‍್ಯಾಂಕ್, ಕೋಣಿಯ ರಮೇಶ್ ಮೊಗವೀರ ಹಾಗೂ ವನಜಾ ದಂಪತಿಗಳ ಪುತ್ರಿ ಶೃದ್ಧಾ ಆರ್. ಬಿ.ಬಿ.ಎ. ಪದವಿಯಲ್ಲಿ 8ನೇ ರ‍್ಯಾಂಕ್ ಗಳಿಸಿದ್ದಾರೆ.
ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ, ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ, ಕಾಲೇಜಿನ ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

