Kundapra.com ಕುಂದಾಪ್ರ ಡಾಟ್ ಕಾಂ

ಚಕ್ರವರ್ತಿ ಟ್ರೋಫಿ: ಪಂದ್ಯಾಟ ವೀಕ್ಷಿಸಲು ನಟ ವಿಜಯ ರಾಘವೇಂದ್ರ, ಸಾಧುಕೋಕಿಲ ಕುಂದಾಪುರಕ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟದ ಕೊನೆಯ ದಿನ ಪಂಟ್ಯಾಟ ವೀಕ್ಷಿಸಲು ಕನ್ನಡ ಚಿತ್ರರಂಗದ ಚಿರಪರಿಚಿತ ನಟ ವಿಜಯ ರಾಘವೇಂದ್ರ ಹಾಗೂ ಹಾಸ್ಯನಟ ಸಾಧುಕೋಕಿಲ ಆಗಮಿಸಿ ಕ್ರಿಕೆಟ್ ರಂಗು ಹೆಚ್ಚಿಸಿದರು.

ನೆಚ್ಚಿನ ನಟರ ಆಗಮನವಾಗುತ್ತಿದ್ದಂತೆ ಮೈದಾನದಲ್ಲಿದ್ದ ನೂರಾರು ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ನಟರನ್ನು ಸ್ವಾಗತಿಸಿದರೇ, ಚಕ್ರವರ್ತಿ ಕ್ರಿಕೆಟ್ ತಂಡದ ಸದಸ್ಯರು ವೇದಿಕೆಗೆ ಬರಮಾಡಿಕೊಂಡರು. ಕುಂದಾಪುರದ ಉದ್ಯಮಿ ವಿ. ಕೆ. ಮೋಹನ್ ಅವರೊಂದಿಗೆ ಆಗಮಿಸಿದ್ದ ನಟರು ಅತಿಥಿಗಳ ಗ್ಯಾಲರಿಯಲ್ಲಿ ಕುಳಿತು ಕೆಲಕಾಲ ಕ್ರಿಕೆಟ್ ವೀಕ್ಷಿಸಿ ಬಳಿಕ ತೆರಳಿದರು. ನೂರಾರು ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. (ಕುಂದಾಪ್ರ ಡಾಟ್ ಕಾಂ)

ಪಂದ್ಯಾಟ ಆರಂಭದ ದಿನ ನಟ ರಕ್ಷಿತ್ ಶೆಟ್ಟಿ ಆಗಮಿಸಿದ್ದರು. ಒಟ್ಟಿನಲ್ಲಿ  ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಸ್ಟಾರ್ ಆಕರ್ಷಣೆಯೂ ಆದಂತಾಗಿದೆ. ಸಾವಿರಾರು ಪ್ರೇಕ್ಷಕರು ದಿನವೂ ಪಂದ್ಯಾಟ ವೀಕ್ಷಣೆಗೆ ಆಗಮಿಸಿ ಅಪರೂಪದ ಪಂದ್ಯಾಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

_MG_7393

Exit mobile version