ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಹಾಡಹಗಲೇ ದೋಚಿ ಪರಾರಿಯಾದ ಘಟನೆ ತಾಲೂಕಿನ ಪಡುವರಿ ಗ್ರಾಮದಲ್ಲಿ ಗುರುವಾರ ಬೆಳಗಿನ ಸಮಯದಲ್ಲಿ ನಡೆದಿದೆ.
ಪಡುವರಿಯ ಪರಮೇಶ್ವರ ಪಟವಾಲ್ ಅವರ ಮನೆಗೆ ನುಗ್ಗಿದ ಕಳ್ಳರು ಗೊಡ್ರೇಜ್‌ನಲ್ಲಿ ಇರಿಸಿದ ಒಟ್ಟು ಸುಮಾರು 63 ಗ್ರಾಂ ತೂಕದ ಸುಮಾರು 5 ಲಕ್ಷ ಮೌಲ್ಯದ ಚಿನ್ನದ ಚೈನ್ ರಿಂಗ್ ಕೀ ಒಲೆ ಬ್ರಾಸ್ ಲೈಟ್ ಪೆಂಡೆಂಟ್ ಮತ್ತು ನಗದು ರೂ.20,000 ಕದ್ದು ಪರಾರಿಯಾಗಿದ್ದಾರೆ.
ಪರಮೇಶ್ವರ ಪಟವಾಲ್ ಅವರ ಮನೆಯವರು ಕಾರ್ಯಕ್ರಮಕ್ಕೆ ತೆರಳಿದ್ದು, ಯಾರೂ ಇಲ್ಲದ್ದನ್ನು ಗಮನಿಸಿ ಮನೆಯ ಹಿಂಬದಿಯ ಮೂಲಕ ಒಳನುಗ್ಗಿ ಬಾಗಿಲು ಹಾಗೂ ಕಪಾಟು ಮುರಿದು ಕವಾಟಿನಲ್ಲಿದ್ದ ಚಿನ್ನಾಭರಣ – ನಗದು ಕದ್ದು ಪರಾರಿಯಾಗಿದ್ದಾರೆ ಎಂದು ಅಂದಾಜಿಸಲಗಿದೆ.
ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದೀದಮ ಪರಿಶೀಲನೆ ಮುಂದುವರಿದಿದೆ.

