ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶ್ರೀಮೂಕಾಂಬಿಕಾ ದೇವಸ್ಥಾನದ ಮನ್ಮಹಾರಥೋತ್ಸವದ ಅಂಗವಾಗಿ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಬೆಳಗ್ಗೆ 7.30ಕ್ಕೆ ಗಣಪತಿ ಪ್ರಾರ್ಥನೆ, ಅಂಕುರಾವಾಸ, ಸಿಂಹಯಾಗ ಧಾರ್ಮಿಕ ವಿಧಿಯ ಬಳಿಕ ವೃಷಭಲಗ್ನ ಸುಮೂಹರ್ತದಲ್ಲಿ ಧ್ವಜಾರೋಹಣ ನೆರವೇರಿಸಿ ಮನ್ಮಹಾರಥೋತ್ಸವದ ಉತ್ಸವಾದಿಗಳಿಗೆ ಚಾಲನೆ ನೀಡಲಾಯಿತು.
ದೇವಳದ ತಂತ್ರಿ, ವ್ಯವಸ್ಥಾಪನಾ ಸಮಿತಿ ಸದಸ್ಯ ನಿತ್ಯಾನಂದ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸದಸ್ಯರಾದ ಧನಾಕ್ಷಿ, ಸುರೇಂದ್ರ ಶೆಟ್ಟಿ ಉಪ್ಪಿನಕುದ್ರು ರಾಜೇಶ್ ಕಾರಂತ, ಮಹಾಲಿಂಗ ನಾಯ್, ಸುಧಾ ಕೆ., ಅಭಿಲಾಷ್, ರಘು ರಾಮ ದೇವಾಡಿಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಮಾ.12ರಂದು ಮನ್ಮಹಾರಥೋತ್ಸವ:
ಮಾ.6ರಿಂದ ಮಾ.14ರ ತನಕ ಪ್ರತಿದಿನ ಸಂಜೆ ನಾನಾ ಉತ್ಸಾವಾದಿಗಳು ನಡೆಯಲಿದ್ದು ಮಾ.12ರಂದು ಮನ್ಮಹಾರಥೋತ್ಸವ ಜರುಗಲಿದೆ.

