ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಬಾಂಬೆ ನಡೆಸುವ ಬ್ಯಾಚುಲರ್ ಆಫ್ ಡಿಸೈನ್ ಕೋರ್ಸ್ ಪ್ರವೇಶ ಪಡೆಯಲು ನಡೆಯುವ ಯುಸೀಡ್ 2026 ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ತೋಳಾರ್ ಅಮೋಘ ಸಾಧನೆ ಮಾಡಿದ್ದಾರೆ.
ಜನವರಿ 2026ರಲ್ಲಿ ನಡೆದ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಸುಜಲ್ ತೋಳಾರ್ ಪ್ರಥಮ ಪ್ರಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 179ನೇ ರ‍್ಯಾಂಕ್ ಪಡೆದು ಮುಂದಿನ ಹಂತದ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿದ್ದಾರೆ.
ಜನತಾ ಪದವಿಪೂರ್ವ ಕಾಲೇಜಿನಲ್ಲಿ ನುರಿತ ಉಪನ್ಯಾಸಕರಿಂದ ತರಬೇತಿ ಪಡೆದ ಅವರು ಈ ಸಾಧನೆ ಮಾಡಿರುವುದು ಸಂಸ್ಥೆಗೆ ಗೌರವ ತಂದಿದೆ. ಪ್ರಸ್ತುತ ಬಹುಬೇಡಿಕೆಯುಳ್ಳ ಈ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಿಗೆ ಜನತಾ ಪದವಿಪೂರ್ವ ಕಾಲೇಜು ಉತ್ತಮ ತರಬೇತಿ ನೀಡುತ್ತಿದ್ದು, ಆರ್ಕಿಟೆಕ್ಟರ್ ಕ್ಷೇತ್ರದ ನಾಟಾ, ಜೆಇಇ ಬಿ.ಆರ್ಕ್, ನಿಫ್ಟ್, ಜೆಇಇ ಮೈನ್ಸ್ ಹಾಗೂ ಅಡ್ವಾನ್ಸ್ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿದ್ದು. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಭೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕೃಷಿ ಕೂಲಿ ಕಾರ್ಮಿಕ ವರ್ಗದ ಬಡ ಕುಟುಂಬದ ಮಕ್ಕಳು, ಆರ್ಥಿಕವಾಗಿ ಅಶಕ್ತವಾಗಿರುವ ಸಾಮಾನ್ಯ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ನಮ್ಮ ಉದ್ದೇಶ ಈಡೇರಿದೆ ಎನ್ನುವ ಖುಷಿ ಇದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಜನತಾ ಸಂಸ್ಥೆಗೆ ಹೆಮ್ಮೆಯ ವಿಷಯ ವಾಗಿದೆ – ಗಣೇಶ್ ಮೊಗವೀರ. ಹೆಮ್ಮಾಡಿ ಜನತಾ ಪಪೂ ಕಾಲೇಜಿನ ಅಧ್ಯಕ್ಷರು, ಪ್ರಾಂಶುಪಾಲರು

