ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ವೆಬ್ ಡೆವಲಪರ್, ನೆಂಪು ಮೂಲದ ಮುಕೇಶ್ ಕೃಷ್ಣ ಶೆಟ್ಟಿ (39) ಮುಕೇಶ್ ಕೃಷ್ಣ ಎಂಬವರು ಮೃತಪಟ್ಟಿದ್ದಾರೆ. ಅವರು ಮಾರ್ಚ್ 5ರಂದು ಕುಂದಾಪುರದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳಿಗೆ ತೆರಳುತ್ತಿದ್ದರು.
ಯಲ್ಲಾಪುರ ತಾಲೂಕಿನ ಮಳಲಗಾಂವ ಬಳಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ 108 ವಾಹನದ ಮೂಲಕ ಮುಕೇಶ್ ಕೃಷ್ಣ ಶೆಟ್ಟಿ ಅವರನ್ನು ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೂ ಮುಕೇಶ್ ಶೆಟ್ಟಿ ಅವರು ಬದುಕಿ ಉಳಿಯಲಿಲ್ಲ ಎಂದು ತಿಳಿದು ಬಂದಿದೆ. ಬಸ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಾರಿನ ಏರ್ ಬ್ಯಾಗ್ ಬ್ಲಾಸ್ಟ್ ಆಗಿ ಸಾವು ಸಂಭವಿಸಿದೆ ಎಂದು ಮಾತುಗಳು ಕೇಳಿಬಂದಿದೆ.
ಮಂಗಳೂರು ಬೆಂದೂರ್ ವೆಲ್ ನಲ್ಲಿ ಮ್ಯಾಕ್ಸ್ ಇನ್ಪೋಟೆಕ್ ಸಂಸ್ಥೆಯನ್ನು ಕಟ್ಟಿ ಡಿಜಿಟಲ್ ಮೀಡಿಯಾದಲ್ಲಿ ವೆಬ್ಡೆವಲಪರ್ ಆಗಿ ಕೆಲಸ ಮಾಡ್ತಿದ್ರು. ನಾಡಿನ ಹೆಸರಾಂತ ನೂರಾರು ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ಹಿರಿಯ ವೆಬ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದರು.
ಮುಕೇಶ್ ಶೆಟ್ಟಿ ಅವರು ಪತ್ನಿ, ತಾಯಿ ಹಾಗೂ ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.

