Site icon Kundapra.com ಕುಂದಾಪ್ರ ಡಾಟ್ ಕಾಂ

ಅನುಪಮಾ ಹೊಳ್ಳ ಅವರು ಬಿ.ಎಡ್‌ನಲ್ಲಿ ಪ್ರಥಮ ರ್ಯಾಂಕ್‌

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬೀದರ್‌ನ ಎಚ್.ಕೆ.ಇ. ಸೊಸೈಟಿಯ ಬಸವೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಅನುಪಮಾ ಹೊಳ್ಳ ಅವರು ಇಂಗ್ಲೀಷ್, ವಿಜ್ಞಾನ ವಿಭಾಗದ ಬಿ.ಎಡ್‌ನಲ್ಲಿ 8.88 ಎಸ್‌ಜಿಪಿಎ ಶ್ರೇಣಿಗಳಿಸಿ ಕಾಲೇಜಿಗೆ ಪ್ರಥಮ ರ್ಯಾಂಕ್‌ಗಳಿಸಿದ್ದಾರೆ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಹಿತಿಗಳು, ಬೌದ್ಧಿಕ ವಲಯದವರು ಹಾಗೂ ಕಾಲೇಜಿನ ಆಡಳಿತ ವರ್ಗದವರು ಅನುಪಮಾ ಹೊಳ್ಳ ಅವರನ್ನು ಅಭಿನಂದಿಸಿದ್ದಾರೆ. ಅನುಪಮ ಹೊಳ್ಳ ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸಾಹಿತಿ ವಂಡ್ಸೆ ಗೋಪಾಲಕೃಷ್ಣ ಹೊಳ್ಳ ಹಾಗೂ ಮಾಲಿನಿ ಹೊಳ್ಳ ದಂಪತಿಗಳ ಪುತ್ರಿಯಾಗಿದ್ದು, ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮದವರು.

Exit mobile version