Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ – ಮಹಿಳಾ ಸಾಧಕಿಯರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಜೇಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಹೆಮ್ಮಾಡಿಯ ಜಯಶ್ರೀ ವಿನಯ್ ಪೂಜಾರಿ, ಕಾಲೇಜಿನ ಬಹುಮುಖ ಪ್ರತಿಭೆಗಳಾದ ಶ್ರೇಯಾ ಖಾರ್ವಿ, ಬ್ರಾಹ್ಮೀ, ಶೈಕ್ಷಣಿಕ ಪ್ರತಿಭೆಗಳಾದ ಐಶ್ವರ್ಯ ಶೆಟ್ಟಿ, ಗೌತಮಿ, ಕ್ರೀಡಾ ಪ್ರತಿಭೆ ಲಕ್ಷ್ಮಿ ಶೆಟ್ಟಿ, ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿನಿ ಝರಾ ಎಂ. ಇಮ್ರಾನ್ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕರು & ಅಡ್ಮಿಷನ್ ಆಫೀಸರ್‌ರಾದ ಪೂಜಾ ಯಶವಂತ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕಿಯರನ್ನು ಸನ್ಮಾನಿಸಿ, ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕುಂದಾಪುರ ಸಿಟಿ ಜೇಸಿಐ ಅಧ್ಯಕ್ಷ ಜೇಸಿ ಕಿರಣ್ ದೇವಾಡಿಗ, ಜೇಸಿಐ ಕುಂದಾಪುರ ಸಿಟಿಯ ನಿಕಟಪೂರ್ವ ಅಧ್ಯಕ್ಷ ಯೂಸುಫ್ ಸಲೀಮ್, ಕಾರ್ಯದರ್ಶಿ ಜೇಸಿ ಸಂಭ್ರಮ್ ನವೀನ್, ಲೇಡಿ ಜೇಸಿ ಸಂಯೋಜಕಿ ಜೇಸಿ ದೀಪಾ, ಸದಸ್ಯೆ ಜೇಸಿ, ಲಕ್ಷ್ಮೀ ಯುವ ಜೇಸಿ ಚೇರ್‌ಪರ್ಸನ್ ಜೆಜೆಸಿ ರಾಹುಲ್ ಗೋಡೆ, ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ರಶ್ಮಿ ಗಾವಡಿ, ರವೀನಾ ಸಿ. ಪೂಜಾರಿ, ವಿಜಯಶ್ರೀ ಎ. ಉಪಸ್ಥಿತರಿದ್ದರು.   

ಕಾಲೇಜಿನ ಉಪ-ಪ್ರಾಂಶುಪಾಲ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕುಂದಾಪುರ ಸಿಟಿ ಜೇಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಪ್ರಸ್ತಾವಿಸಿದರು. ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಿ. ಭಟ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ| ಸೋನಿ ಡಿ’ಕೋಸ್ಟಾ, ಡಾ| ಸರೋಜಾ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರೇಷ್ಮಾ ಶೆಟ್ಟಿ, ಪ್ರವೀಣಾ ಎಮ್. ಪೂಜಾರಿ, ರಶ್ಮಿತಾ ಶೆಟ್ಟಿ ಸನ್ಮಾನ ಪತ್ರವನ್ನು ವಾಚಿಸಿದರು. 

ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ನಂದಾ ರೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಈ ಸಂದರ್ಭ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಮಹಿಳಾ ಸಾಧಕಿಯರ ಭಾಷಣ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಸುಕೇಶ್ ಕಾರ್ಯಕ್ರಮ ನಿರೂಪಿಸಿದರು. 

Exit mobile version