ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಘನತ್ಯಾಜ್ಯ ನಿರ್ವಹಣೆಗೆ ಉಳ್ತೂರು ಗ್ರಾಮದಲ್ಲಿ ಖರೀದಿಸಿದ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬುಧವಾರ ಭೇಟಿ ನೀಡಿದರು.
ಈ ಸಂರ್ದದಲ್ಲಿ ಸ್ಥಳದಲ್ಲಿ ಸ್ಥಳೀಯ ಗ್ರಾಮಸ್ಥರು ಸ್ಥಳದಲ್ಲಿ ಯಾವುದೇ ಘಟಕ ನಿರ್ಮಾಣ ಮಾಡದಂತೆ ಆಕ್ಷೇಪಣೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅವರು ಸಾರ್ವಜನಿಕರಲ್ಲಿ ಸರಕಾರದ ಯೋಜನೆಯ ಉಪಯೋಗದ ಬಗ್ಗೆ ಈ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲವೆಂದು ಇದನ್ನು ಸದುಪಯೋಗಿಸುವಂತೆ ಮನವರಿಕೆ ಮಾಡಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್ ಸ್ಥಳೀಯರಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಕೂಡ ಎನ್‌ಜಿಟಿ ನಿರ್ದೇಶನವನ್ನು ಪಾಲಿಸಬೇಕಾಗುತ್ತದೆ. ಸುತ್ತಮುತ್ತಲಿನ ಗ್ರಾಮ ಪಂಚಾಯತ್‌ನ ಬಳಸಿದ ನೀರನ್ನು ಸಹಾ ಈ ಘಟಕದಲ್ಲಿ ವಿಲೇಮಾಡಿದ್ದಲ್ಲಿ ಗ್ರಾಮ ಪಂಚಾಯತ್‌ಗೂ ಸಹಾ Infrastructure ನ ಮೊತ್ತವನ್ನು ಉಳಿಸಬಹುದಾಗಿರುವುದಾಗಿ ತಿಳಿಸಿದರು.
ಈ ಬಗ್ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಜಿಲ್ಲಾಧಿಕಾರಿಯವರು ಉಳ್ತೂರು ಗ್ರಾಮದ ಸ್ಥಳೀಯರನ್ನು ಈಗಾಗಲೇ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ಮತ್ತು ಕಾಪು ಪುರಸಭೆಯಲ್ಲಿನ ಘಟಕವನ್ನು ವಿಕ್ಷೀಸಲು ಭೇಟಿ ಮಾಡಿಸುವಂತೆ ಮುಖ್ಯಾಧಿಕಾರಿಯವರಿಗೆ ಸೂಚಿದರು.
ಸರಕಾರದ ಆದೇಶ ಮತ್ತು ಎನ್‌ಜಿಟಿ ಆದೇಶದಂತೆ ಉಳ್ತೂರು ಗ್ರಾಮದಲ್ಲಿ ಬಳಸಿದ ನೀರಿನ ನಿರ್ವಹಣೆ ಯೋಜನೆಯನ್ನು ಕೈಗೊಳ್ಳಲಾಗುವುದಾಗಿ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ ಶ್ರೀಕಾಂತ್ ಹೆಗ್ಡೆ, ಜಿಲ್ಲಾ ಯೋಜನಾ ನಿರ್ದೇಶಕರಾದ ಸುಬ್ರಹ್ಮಣ್ಯ ಶೆಟ್ಟಿ.ಪಿ ಮತ್ತು ಕಾರ್ಯಪಾಲಕ ಅಭಿಯಂತರ ಅರುಣ್ ಕೆ. ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ ಕಾರ್, ಪಟ್ಟಣ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು ಮತ್ತು ವಲಯ ಅರಣ್ಯಾಧಿಕಾರಿ ಕುಂದಾಪುರ ಇತರ ತಂಡ ಉಳ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.