Site icon Kundapra.com ಕುಂದಾಪ್ರ ಡಾಟ್ ಕಾಂ

ಹರ್ಕೂರು: ಕುಸಿದು ಬಿದ್ದು ಯುವಕ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ಹರ್ಕೂರಿನಲ್ಲಿ ಬುಧವಾರ ರಾತ್ರಿ ಮನೆಯ ಸಿಟೌಟ್‌ನಲ್ಲಿದ್ದ ಯುವಕ ಮನೆಯ ಹಿಂದಿದ್ದ ಸ್ನಾನ ಗೃಹಕ್ಕೆ ಹೋಗುವಾಗ ಹಠಾತ್ ಕುಸಿದು ಬಿದ್ದು ಅಸ್ವಸ್ಥಗೊಂಡು, ಎದೆ ನೋವಿನಿಂದ ಸಾವನ್ನಪ್ಪಿದ್ದಾರೆ.

ಹರ್ಕೂರು ಕಟ್ಟಿನಮಕ್ಕಿಯ ನಿವಾಸಿ ಶಶಿದರ ದೇವಾಡಿಗ (25) ಮೃತ ಯುವಕ. ಅವರು ಬಿಬಿಎ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. 4 ವರ್ಷಗಳಿಂದ ವರ್ಕ್ ಪ್ರಮ್ ಹೋಮ್ ನಿಂದ ಊರಲ್ಲಿಯೇ ಇದ್ದರು.

ಮಾ.11ರ ಸಂಜೆ 6.40ರ ಸುಮಾರಿಗೆ ಮನೆಯ ಸಿಟೌಟ್‌ನಲ್ಲಿ ಕುಳಿದಿದ್ದ ಶಶಿಧರ್ ಅವರು ಮನೆಯ ಹಿಂದಿದ್ದ ಸ್ಥಾನ ಗೃಹಕ್ಕೆ ಹೋಗುವಾಗ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅಜ್ಜಿ ಅಕ್ಕಯ್ಯ ಅವರು ಆರೈಕೆ ಮಾಡಿದ್ದು, ಆಗ ತನಗೆ ಉಸಿರು ಕಟ್ಟುತ್ತಿದೆಯೆಂದು ಎದೆ ಹಿಡಿದುಕೊಂಡು ನರಳಾಡಿದರು.

ಕೂಡಲೇ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ, ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಆದರೆ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿ, ಮೃತರ ತಂದೆ ಸದಾಶಿವ ಕೆ. ಉಳ್ಳೂರು 11 ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Exit mobile version