Site icon Kundapra.com ಕುಂದಾಪ್ರ ಡಾಟ್ ಕಾಂ

ಮದರ್ ತೆರೇಸಾ ಮೆಮೋರಿಯಲ್ ಶಾಲೆ: ಪ್ರತಿಷ್ಠಿತ ಇನ್‌ ಸ್ಪಾಯರ್ ಅವಾರ್ಡ್‌ಗೆ ಮೋಕ್ಷಿತ್ ಮತ್ತು ಕಿಶನ್ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ
: ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್‌ಗೆ ಉಡುಪಿ ಜಿಲ್ಲೆಯ ಐದು ತಾಲೂಕುಗಳಲ್ಲಿ 196 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 53 ವಿದ್ಯಾರ್ಥಿಗಳು ಕುಂದಾಪುರ ವಲಯದಿಂದ ಆಯ್ಕೆಯಾಗಿರುತ್ತಾರೆ.

ಈ ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್‌ಗೆ ಮದರ್ ತೆರೇಸಾ ಶಾಲೆಯ ಹೈಸ್ಕೂಲ್ ವಿಭಾಗದ 9ನೇ ತರಗತಿಯ ಮೋಕ್ಷಿತ್ ವಿ. ಶೆಟ್ಟಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ  8ನೇ ತರಗತಿಯ ಕಿಶನ್ ಶೆಟ್ಟಿ ಆಯ್ಕೆ ಆಗಿರುತ್ತಾರೆ.

ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಮೆಲಿಶಾ ಹಾಗೂ ಗ್ರೇಸಿಯವರು ಮಾರ್ಗದರ್ಶನ ನೀಡಿರುತ್ತಾರೆ. ಈ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿ, ಮುಂದಿನ ಹಂತಕ್ಕೆ ಶುಭ ಹಾರೈಸಿರುತ್ತಾರೆ.

Exit mobile version