Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಳಿ ಚಿಪ್ಪು ಹೆಕ್ಕಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಅರಾಟೆ ಸೇತುವೆ ಬಳಿ, ಸೌಪರ್ಣಿಕಾ ನದಿಯಲ್ಲಿ ಮಳಿ ಚಿಪ್ಪು ಹೆಕ್ಕತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ತಕ್ತಿ ಹಂಗಳೂರಿನ ಚಂದ್ರ (39) ಎಂದು ಗುರುತಿಸಲಾಗಿದೆ.

ಚಂದ್ರ ಹಾಗೂ ಅವರ ಭಾವ ಅಜಿತ್ ಅವರು ಅರಾಟೆ ಸೇತುವೆ ಬಳಿ ಮಳಿ ಹೆಕ್ಕಲು ಹೋಗಿದ್ದರು. ನೀರಿಗೆ ಇಳಿದ ಸ್ವಲ್ಪ ಸಮಯದ ನಂತರ ಚಂದ್ರ ಅವರು ಕಾಣದೇ ಇದ್ದು, ಹುಡುಕಾಟ ನಡೆಸಲಾಗಿದೆ. ಮರುದಿನ ಬೆಳಗ್ಗೆ ಆರಾಟೆ ಸೇತುವೆ ಬಳಿಯ ನದಿಯಲ್ಲಿ ಚಂದ್ರ ಅವರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version