Site icon Kundapra.com ಕುಂದಾಪ್ರ ಡಾಟ್ ಕಾಂ

ಇನ್‌ಸ್ಪಾಯರ್‌ ಅವಾರ್ಡ್ ಸ್ಪರ್ಧೆಗೆ ಸುಜನ್ ಪೂಜಾರಿ ಮತ್ತು ಸಂದೇಶ ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ (NIF) ಜಂಟಿಯಾಗಿ ಆಯೋಜಿಸುವ  ಇನ್‌ಸ್ಪಾಯರ್‌ ಅವಾರ್ಡ್ ಸ್ಪರ್ಧೆಗೆ ನಾವುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸುಜನ್ ಪೂಜಾರಿ ಮತ್ತು ಸಂದೇಶ ಪೂಜಾರಿ ಆಯ್ಕೆ ಆಗಿರುತ್ತಾರೆ.

ಅವರಿಗೆ ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್. ಅವರು ಮಾರ್ಗದರ್ಶನ ಮಾಡಿದ್ದರು.ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರು ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Exit mobile version