Site icon Kundapra.com ಕುಂದಾಪ್ರ ಡಾಟ್ ಕಾಂ

ಜಡ್ಕಲ್: ಹೊಳೆಗೆ ಈಜಲು ಹೋದ ರಿಕ್ಷಾ ಚಾಲಕ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು:
ತಾಲೂಕಿನ ಜಡ್ಕಲ್ ಗ್ರಾಮದ ಹಯ್ಯಂಗಾರು ಕಾನ್ಕಿ ಕನ್ಯಾಸ್ತಿ ಹೊಳೆಗೆ ಈಜಲು ಹೋದ ಗೋಳಿಹೊಳೆ ಗ್ರಾಮದ ಅರೆಶಿರೂರು ನಿವಾಸಿ ರಿಕ್ಷಾ ಚಾಲಕ ಸಂದೀಪ್ ನಾಯ್ಕ (32) ರವಿವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಗೋಳಿಹೊಳೆಯ ಹೊಟೇಲ್ ಉದ್ಯಮಿ ಬಾಬಣ್ಣ ಅವರ ಪುತ್ರರಾಗಿರುವ ಸಂದೀಪ್ ಸ್ನೇಹಿತರೊಂದಿಗೆ ತೆರಳಿದ್ದರು ಎನ್ನಲಾಗಿದೆ. ಮೃತರು ಅವಿವಾಹಿತರಾಗಿದ್ದು ಬಾಬಣ್ಣ ಅವರ ಮೂವರು ಗಂಡುಮಕ್ಕಳಲ್ಲಿ ಒಬ್ಬರಾಗಿದ್ದಾರೆ.

ಸುದ್ದಿ ತಿಳಿದೊಡನೆ ಕೊಲ್ಲೂರು ಎಸ್.ಐ. ವಿನಯ ಅವರ ನೇತೃತ್ವದಲ್ಲಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈಲೇಶ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಅನಂತರ ವಾರಸುದಾರರಿಗೆ ಮೃತ ದೇಹ ಹಸ್ತಾಂತರಿಸಿದರು.

Exit mobile version