Site icon Kundapra.com ಕುಂದಾಪ್ರ ಡಾಟ್ ಕಾಂ

ಸಿದ್ದಾಪುರ: ಜೂಜಾಟದಲ್ಲಿ ತೊಡಗಿದ್ದ 4 ಮಂದಿಯ ಬಂಧನ, ಇಬ್ಬರು ಪರಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಅಕ್ರಮವಾಗಿ ಅಂದರ್‌-ಬಾಹರ್‌ ಇಸ್ಟೀಟ್‌ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ನಡೆದಿದೆ.

ಸಿದ್ದಾಪುರ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ ಮಾಹಿತಿಯ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. 6 ಜನರ ಪೈಕಿ ಆರೋಪಿಗಳಾದ ಸುಧಾಕರ, ರಮೇಶ್‌, ಮನೋಹರ್‌, ಮಹೇಶ್ ಎಂಬುವರನ್ನು ಬಂಧಿಸಲಾಗಿದೆ. ಮನೆಯ ಕಂಪೌಂಡ್‌ ಆವರಣವನ್ನು ಹಾರಿಕೊಂಡು ಓಡಿ ಹೋದ ಇಬ್ಬರು ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಒಬ್ಬಾತನು ಹರ್ಷ, ಮತ್ತೊಬ್ಬನು ಕೃಷ್ಣ ಪೂಜಾರಿ ಎಂಬುದಾಗಿ ತಿಳಿದು ಬಂದಿದೆ.

ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 6,700/, ಕೆಂಪು ಮತ್ತು ಕಪ್ಪು ಬಣ್ಣದ ಬೆಡ್‌ಶೀಟ್‌, 52 ಇಸ್ಪೀಟ್ ಎಲೆಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version