Kundapra.com ಕುಂದಾಪ್ರ ಡಾಟ್ ಕಾಂ

ಬಿದ್ಕಲಕಟ್ಟೆ: ಐಟಿಐ ತರಬೇತಿದಾರರಿಗೆ ಫೈಯರ್ & ಸೇಫ್ಟಿ ಕಾರ್ಯಾಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್‌ಕಟ್ಟೆ ಯಲ್ಲಿ ಸೇಫ್ಟಿ ಮಾಸಾಚರಣೆ ಅಂಗವಾಗಿ ಅಗ್ನಿಶಾಮಕ ಠಾಣೆ ಕುಂದಾಪುರ ಇವರಿಂದ ಐಟಿಐ ತರಬೇತಿದಾರರಿಗೆ ಫೈಯರ್ & ಸೇಫ್ಟಿ ಕಾರ್ಯಾಗಾರ  ನಡೆಯಿತು.

ಅಗ್ನಿಶಾಮಕ ಠಾಣೆಯ ಲೀಡಿಂಗ್ ಫೈರ್ ಫೈಟರ್ ಬಾಲಕೃಷ್ಣ ವಿವಿಧ ವಿಧದ ಅಗ್ನಿ ಹಾಗೂ ಅದಕ್ಕೆ ಸರಿಯಾದ ಅಗ್ನಿನಂದಕ ಮತ್ತು ಅಗ್ನಿನಂದಕಗಳ ಹೊರತಾಗಿಯೂ ಸಾಮಾನ್ಯ ಜನರು ಹೇಗೆ ಬೆಂಕಿಯನ್ನು ನಿಗ್ರಹಿಸಬೇಕು ಎನ್ನುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು .

ಸಿಬ್ಬಂದಿಗಳಾದ ಕೆಎಲ್ ಹೊಸರಿತ್, ದೀಪಕ್, ಬಸವರಾಜ್ , ಅಭಿಷೇಕ್ ಅಗ್ನಿ ನಂದಿಸುವ ವಿವಿಧ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು.

ಕಿರಿಯ ತರಬೇತಿ ಅಧಿಕಾರಿಗಳಾದ ಪ್ರಸನ್ನ ಆಚಾರ್ಯ ಬಸವ ನಾಯ್ಕ್ , ಪ್ರತಾಪ್ ಕುಮಾರ್ , ಅಜಿತ್ ಆಚಾರ್, ಸುಚಿತ್ರ, ಪ್ರಫುಲ್ಲಾ ಕೆ. ಎನ್. , ಸುಮಂಗಲ, ರೂಪ ದೇವಿ ಕಚೇರಿ ಸಿಬ್ಬಂದಿಗಳಾದ ಸುಮಾರಾಣಿ, ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಐಟಿಐನ ತರಬೇತಿ ಅಧಿಕಾರಿ ಗಣೇಶ್ ಹೆಚ್. ಸಂಯೋಜಿಸಿ, ಸರ್ವರನ್ನು ಸ್ವಾಗತಿಸಿದರು. ಪ್ಲೇಸ್ಮೆಂಟ್ ಆಫೀಸರ್ ಮನೋಹರ್ ಶೆಟ್ಟಿ ವಂದಿಸಿದರು. ಪ್ರಾಚಾರ್ಯ ಹರೀಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದ್ದು ಎಲ್ಲ ತರಬೇತಿದಾರರು ಸಕ್ರಿಯವಾಗಿ ಪಾಲ್ಗೊಂಡರು.

Exit mobile version