Kundapra.com ಕುಂದಾಪ್ರ ಡಾಟ್ ಕಾಂ

ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಮೂತ್ರಪಿಂಡ ದಿನಾಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಅಲ್ಲೈಡ್ ಹೆಲ್ತ್ ವಿಭಾಗದ ವತಿಯಿಂದ ವಿಶ್ವ ಮೂತ್ರಪಿಂಡ ದಿನವನ್ನು ಇಲ್ಲಿನ ಚಿನ್ಮಯಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು.

ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ, ಜನರ ಬಗ್ಗೆ ಕಾಳಜಿ ವಹಿಸುವುದು, ಗ್ರಹವನ್ನು ರಕ್ಷಿಸುವುದು ಎಂಬ ವಿಷಯದ ಅಡಿಯಲ್ಲಿ  ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನರ್ಸಿಂಗ್ ಸೂಪರಿಂಟೆಂಡೆಂಟ್ ಐಡಾ ಅಲ್ಮೇಡಾ, ಕ್ವಾಲಿಟಿ ಮುಖ್ಯಸ್ಥ ಪ್ರದೀಪ್ ಕುಮಾರ್, ಉಪನ್ಯಾಸಕಿ ಅಂಜಲಿ ಮತ್ತು ರಕ್ಷಿತಾ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮೂತ್ರಪಿಂಡದ ಆರೈಕೆ ಮತ್ತು ತಡೆಗಟ್ಟುವ ಕ್ರಮಗಳ ಮಹತ್ವವನ್ನು ಎತ್ತಿ ತೋರಿಸಲು ವಿವಿಧ ಚಟುವಟಿಕೆಗಳು, ಕಿರು  ನಾಟಕ ಮತ್ತು ಮಾಹಿತಿ ವಿನಿಯಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು 2ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ರಕ್ಷಿತಾ ಮತ್ತು  ನಿಕಿತಾ ನಿರ್ವಹಿಸಿದರು. ಚಿರಂಜೀವಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

Exit mobile version