ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆನ್ ಲೈನ್ ಮೂಲಕ ಬಿಟ್ ಕಾಯಿನ್ ಖರೀದಿ ಮಾಡಿ ಹಣವನ್ನು ದ್ವಿಗುಣ ಮಾಡಿ ಕೊಡುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ
ಚಂದ್ರಿಕಾ (38) ಅಂಕದಕಟ್ಟೆ ಹಾಗೂ ಭಾಸ್ಕರ (45) ಶಿವಮೊಗ್ಗ ವಿರುದ್ಧ ಯಶೋದಾ ಹಾಲಾಡಿ ದೂರು ನೀಡಿದ್ದಾರೆ.
ಅಂಕದಕಟ್ಟೆಯ ಸಮೀಪ ಚಂದ್ರಿಕಾ ಅವರ ಕಚೇರಿಗೆ ಬೈಂದೂರಿನ ಸ್ವದೀಪ್ ಶೆಟ್ಟಿ ಅವರು ಹಣ ನೀಡುವಂತೆ ಹೇಳಿದ್ದು, ಬಳಿಕ ಕೆಲವು ನಕಲಿ ಕಾಗದ ಪತ್ರ ಸೃಷ್ಟಿಸಿದ ಚಂದ್ರಿಕಾ ಇದು ಕಾನೂನಾತ್ಮಕ ವ್ಯವಹಾರವಾಗಿದ್ದು, ಲೈಸೆನ್ಸ್ ಇರುವುದಾಗಿ ಸುಳ್ಳು ಹೇಳಿ ನಂಬಿಸಿದ್ದಾರೆ. 2024ರ ಡಿ.11 ರಂದು 3.80 ಲಕ್ಷ ರೂ., ಹಂತ- ಹಂತವಾಗಿ ಒಟ್ಟು 17 ಲಕ್ಷ ರೂ. ಪಡೆದಿದ್ದಾರೆ.
ಈ ಬಗ್ಗೆ ಬಾಂಡ್ ನೀಡದೇ, ಮಾ.16ಕ್ಕೆ ಕಚೇರಿಗೆ ಹೋದಾಗ ಅಲ್ಲಿ ಚಂದ್ರಿಕಾ ಹಾಗೂ ಭಾಸ್ಕರ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಅಣ್ಣ ಶಂಕರ ನಾಯ್ಕ, ಪತ್ನಿ ಲೀಲಾ, ಅವರ ಪರಿಚಯದ ನಾಗಶ್ರೀ ಅವರಿಂದ ಹಣ ಪಡೆದು, ದ್ವಿಗುಣ ಮಾಡುವುದಾಗಿ ನಂಬಿಸಿ ವಂಚಿಸಿರುವುದಾಗಿ ಯಶೋದಾ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

