ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನೆ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಶಿರೂರು ಗ್ರಾಮದ ಕೋಣಮಕ್ಕೆ ಎಂಬಲ್ಲಿ 25 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ, ಮನೆಯೊಳಗಿನ ಕಪಾಟು ತೆರೆದು ಕಳ್ಳತನಕ್ಕೆ ಪಯತ್ನಿಸುತ್ತಿದ್ದಾಗ ಮನೆಯವರು ಎಚ್ಚರಗೊಂಡು ಬೊಬ್ಬೆ ಹಾಕಿದಾಗ ಹಿಂಬಾಗಿಲಿನಿಂದ ಓಡಿ ಹೋಗಿರುವುದಾಗಿದೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆಯನ್ನು ಮಾನ್ಯ ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಐ.ಪಿ.ಎಸ್. ರವರ ಅದೇಶದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯಕ್ ಉಡುಪಿ ಜಿಲ್ಲೆ ಅವರ ನಿರ್ದೇಶನದಂತೆ ಮತ್ತು ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ ಉಪವಿಭಾಗರವರ ಮತ್ತು ಶಿವಕುಮಾರ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ಅವರ ಮಾರ್ಗದರ್ಶನದಲ್ಲಿ ಬೈಂದೂರು ಠಾಣೆಯ ಪಿ ಎಸ್ ಐ ರವರಾದ ಸುನೀಲ್ ಕುಮಾರ್ ಬಿ.ವೈ ರವರ ನೇತ್ರತ್ವದಲ್ಲಿ ಬೈಂದೂರು ಠಾಣೆಯ ಪಿ.ಎಸ್.ಐ ರವರಾದ ನವೀನ ಪಿ. ಬೋರಕರ ಮತ್ತು ಸಿಬ್ಬಂದಿಯವರಾದ ಹೆಚ್ ಸಿ ಚಂದ್ರಶೇಖರ, ಸಿಪಿಸಿ ಚಿದಾನಂದ, ಸಿಪಿಸಿ ಮಾಳಪ್ಪ ದೇಸಾಯಿ ಮತ್ತು ಜೀಪು ಚಾಲಕರಾದ ರಾಮದಾಸ್ ರವರು ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿರುತ್ತದೆ.
ಈ ತಂಡವು ದಿನಾಂಕ 20.03.2026 ರಂದು ಆರೋಪಿ ಪೌಜಾನ್ ಅಹ್ಮದ್‌ನನ್ನು ವಶಕ್ಕೆ ಪಡೆದು ಬಂಧಿಸಿರುತ್ತಾರೆ. ಆರೋಪಿಯು ಈ ಕೆಳಗಿನ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಬೈಕ್ ವ್ಹೀಲಿಂಗ್ ಪ್ರಕರಣದಲ್ಲೂ ಕೂಡ ಆರೋಪಿಯಾಗಿರುತ್ತಾನೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿರುತ್ತದೆ.

